ಹಣ್ಣುಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಏಕೆಂದರೆ ಹಣ್ಣುಗಳು ಹಲವು ಬಗೆಯ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಅಲ್ಲದೇ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಹಾಗಾಗಿ ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ಈ ಹಣ್ಣುಗಳನ್ನು ಸೇವಿಸಿ.
ಅನಾನಸ್ : ಇದರಲ್ಲಿ ಸಾಕಷ್ಟು ಕ್ಯಾಲೋರಿಗಳು ಕಂಡುಬರುತ್ತದೆ. ಇದನ್ನು ನಿಯಮಿತವಾಗಿ ಸೇವಿಸಿದರೆ ತೂಕವನ್ನು ಹೆಚ್ಚಿಸಿಕೊಳ್ಳಬಹುದು.
ಬಾಳೆಹಣ್ಣು : ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗಿದೆ. ಇದನ್ನು ಹಾಲಿನ ಜೊತೆ ಸೇವಿಸಿದರೆ ಹೆಚ್ಚಿನ ಕ್ಯಾಲೋರಿ ಸಿಗುವುದರಿಂದ ತೂಕ ಹೆಚ್ಚಾಗುತ್ತದೆ.
ಪೀಚ್ ಹಣ್ಣಿನಲ್ಲಿಯೂ ಕೂಡ ಕ್ಯಾಲೋರಿ ಅಧಿಕವಾಗಿರುವುದರಿಂದ ಇದನ್ನು ಪ್ರತಿದಿನ ಸೇವಿಸಿದರೆ ತೂಕ ಹೆಚ್ಚಾಗುತ್ತದೆ.
ದ್ರಾಕ್ಷಿ : ಇದರಲ್ಲಿ ಕಾರ್ಬೋಹೈಡ್ರೇಟ್ ಗಳು ಹೆಚ್ಚಾಗಿರುವ ಕಾರಣ ಇದನ್ನು ಸೇವಿಸಿದರೆ ತೂಕ ಹೆಚ್ಚಾಗುತ್ತದೆ.