ಸೂರ್ಯಕಾಂತಿ ಬೀಜಗಳನ್ನು ಕೂಡ ಸೂಪರ್ ಫುಡ್‌ಗಳ ಪಟ್ಟಿಯಲ್ಲಿ ಸೇರಿಸಬಹುದು. ಯಾಕಂದ್ರೆ ಇವುಗಳಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿವೆ. ನಿಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಸೂರ್ಯಕಾಂತಿ ಬೀಜಗಳಲ್ಲಿದೆ. ಇದರಲ್ಲಿ ಫೈಬರ್ ಅಂಶವಿರುವುದರಿಂದ ನಿಮ್ಮ ಉದರಕ್ಕೆ ಸೂರ್ಯಕಾಂತಿ ಬೀಜ ತುಂಬಾನೇ ಒಳ್ಳೆಯದು.
ಇದು ಉತ್ತಮ ನೀರಿನ ಅಂಶವನ್ನೂ ಹೊಂದಿದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇದು ಪ್ರಯೋಜನಕಾರಿ. ಸೂರ್ಯಕಾಂತಿ ಬೀಜಗಳ ಸೇವನೆಯಿಂದ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು. ಕೊಬ್ಬು, ಪ್ರೋಟೀನ್ ಮತ್ತು ಫೈಬರ್ ಈ ಮೂರು ಅಂಶಗಳು ಸೂರ್ಯಕಾಂತಿ ಬೀಜಗಳಲ್ಲಿ ಸಮೃದ್ಧವಾಗಿದೆ. ಹಾಗಾಗಿ ಇದು ನಿಮ್ಮ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಮತ್ತು ಪೂರ್ಣತೆಯ ಭಾವನೆಯನ್ನು ಹೆಚ್ಚಿಸುವ ಮೂಲಕ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸೂರ್ಯಕಾಂತಿ ಬೀಜಗಳ ಸೇವನೆಯಿಂದ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸಿಕೊಳ್ಳಬಹುದು. ವಿಟಮಿನ್-ಇ, ಸತು ಮತ್ತು ಸೆಲೆನಿಯಮ್ ಇರುವುದರಿಂದ ಸೂರ್ಯಕಾಂತಿ ಬೀಜಗಳನ್ನು ಸೇವನೆ ಮಾಡಿದ್ರೆ ಇಮ್ಯೂನಿಟಿ ಹೆಚ್ಚುತ್ತದೆ. ಇದರಲ್ಲಿರುವ ವಿಟಮಿನ್ ಇ ನಮ್ಮನ್ನು ಅನೇಕ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುತ್ತದೆ. ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ ಮತ್ತು ನಮ್ಮ ದೇಹದಲ್ಲಿನ ಆರೋಗ್ಯಕರ ಜೀವಕೋಶಗಳಿಗೆ ಹಾನಿಯಾಗದಂತೆ ಸ್ವತಂತ್ರ ರಾಡಿಕಲ್ಗಳನ್ನು ತಡೆಯುತ್ತದೆ.
ಹೀಗಾಗಿ ಸೂರ್ಯಕಾಂತಿ ಬೀಜಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಸೂರ್ಯನ ಬೀಜಗಳಲ್ಲಿ ಇರುವ ಫೈಬರ್ ಅಂಶವು ರಕ್ತದಲ್ಲಿನ ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಇರುವ ವಿಟಮಿನ್ ಬಿ 3 ಒಟ್ಟು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.