ನಿಂಬೆ ಹಣ್ಣು ತೂಕವನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ನಾವೆಲ್ಲರೂ ಪ್ರತಿನಿತ್ಯ ಅಡುಗೆಗೂ ನಿಂಬೆಹಣ್ಣನ್ನು ಬಳಸುತ್ತೇವೆ, ಆದರೆ ಅದರ ಸಿಪ್ಪೆ ತೆಗೆದು ಎಸೆಯುತ್ತೇವೆ. ನಿಂಬೆ ಸಿಪ್ಪೆಯಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳು ಕಂಡುಬರುತ್ತವೆ.
ತೂಕ ಇಳಿಸುವುದರ ಜೊತೆಗೆ ನಿಂಬೆ ಸಿಪ್ಪೆಯಿಂದ ಹಲವಾರು ಪ್ರಯೋಜನಗಳಿವೆ. ಇದಲ್ಲದೇ ನಿಂಬೆ ಸಿಪ್ಪೆಯಲ್ಲಿ ಡಿ-ಲಿಮೋನೆನ್ ಎಂಬ ಅಂಶವಿದ್ದು ಇದು ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ನಷ್ಟಕ್ಕೆ ನಿಂಬೆ ಸಿಪ್ಪೆಯನ್ನು ಹೇಗೆ ಬಳಸಬಹುದು ಅನ್ನೋದನ್ನು ನೋಡೋಣ.
ದೇಹವನ್ನು ನಿರ್ವಿಷ ಮಾಡುತ್ತದೆ: ನಿಂಬೆ ಸಿಪ್ಪೆಯಲ್ಲಿ ಫ್ಲೇವನಾಯ್ಡ್‌ಗಳು ಕಂಡುಬರುತ್ತವೆ. ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಒತ್ತಡದಲ್ಲಿದ್ದಾಗ ನಿಂಬೆ ಸಿಪ್ಪೆಯನ್ನು ತಿನ್ನಬಹುದು. ದೇಹದಲ್ಲಿ ಕೊಬ್ಬು ಹೆಚ್ಚಾದಾಗ ವಿಷಕಾರಿ ಅಂಶವೂ ಹೆಚ್ಚುತ್ತದೆ. ನಿಂಬೆಹಣ್ಣಿನ ಸಿಪ್ಪೆಯನ್ನು ಸೇವಿಸುವುದರಿಂದ ದೇಹದಲ್ಲಿರುವ ಟಾಕ್ಸಿನ್‌ಗಳು ಹೊರಬರುತ್ತವೆ. ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ, ಕೊಬ್ಬನ್ನು ಸುಡುವಲ್ಲಿ ಸಹಾಯ ಮಾಡುತ್ತದೆ.
ನಿಂಬೆ ಸಿಪ್ಪೆಯ ಚೂರ್ಣ: ನಿಂಬೆ ಸಿಪ್ಪೆಯಲ್ಲಿ ವಿಟಮಿನ್ ಸಿ ಮತ್ತು ಫೈಬರ್ ಇರುವುದರಿಂದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಂಬೆ ಸಿಪ್ಪೆಯನ್ನು ಸೇವಿಸಲು, ಅದನ್ನು ಒಣಗಿಸಿ ಪುಡಿಯನ್ನು ತಯಾರಿಸಿ. ಈ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ. ನಂತರ ಪ್ರತಿದಿನ ನಿಂಬೆ ಸಿಪ್ಪೆಯ ಪುಡಿಯನ್ನು ಉಗುರು ಬೆಚ್ಚಗಿನ ನೀರಿಗೆ ಬೆರೆಸಿ ಕುಡಿಯಬಹುದು.
ತೂಕ ಇಳಿಸಲು ನಿಂಬೆ ಸಿಪ್ಪೆಯ ಪಾನೀಯ: ನಾಲ್ಕಾರು ನಿಂಬೆ ಸಿಪ್ಪೆಯನ್ನು ತೆಗೆದುಕೊಂಡು ಅದನ್ನು 5 ಲೀಟರ್ ನೀರಿಗೆ ಹಾಕಿ ಅರ್ಧ ಗಂಟೆ ಕುದಿಸಿ. ನಂತರ ಆ ಸಿಪ್ಪೆಯನ್ನು ತೆಗೆದುಹಾಕಿಬಿಡಿ. ಪ್ರತಿದಿನ ಬೆಳಿಗ್ಗೆ ಈ ನಿಂಬೆ ಪಾನೀಯವನ್ನು ಕುಡಿಯಿರಿ.