ಮೆಂತೆ ಸೊಪ್ಪಿನ ಪರೋಟಾ, ಪಲ್ಯೆ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕ್ಕೂ ಒಳ್ಳೆಯದು. ಹಾಗೆ ಮೆಂತೆ ಕಾಳು ಕೂಡ ಆರೋಗ್ಯಕಾರಿ. ಅನೇಕ ರೋಗಗಳನ್ನು ತಡೆಗಟ್ಟುವ ಶಕ್ತಿ ಮೆಂತ್ಯೆಗಿದೆ. ತೂಕ ಇಳಿಸುವುದು, ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡುವುದು ಹಾಗೂ ಮಧುಮೇಹವನ್ನು ಓಡಿಸುವ ಕೆಲಸ ಮಾಡುತ್ತದೆ.
ಪದೇ ಪದೇ ಹಸಿವಾಗುತ್ತೆ ಎನ್ನುವವರು ಮೆಂತೆ ಸೇವನೆ ಮಾಡಬೇಕು. ಇದು ಹಸಿವನ್ನು ಕಡಿಮೆ ಮಾಡುತ್ತದೆ. ಇದ್ರಲ್ಲಿ ಫೈಬರ್ ಅಂಶ ಜಾಸ್ತಿ ಇರುತ್ತದೆ. ಇದು ಮಲಬದ್ಧತೆಯನ್ನೂ ದೂರ ಮಾಡುತ್ತದೆ. ಮೆಂತೆ ಕಾಳಿನಿಂದ ಹೇಗೆ ತೂಕ ಇಳಿಸಿಕೊಳ್ಳೋದು ಎಂಬ ವಿವರ ಇಲ್ಲಿದೆ.
ಮೆಂತೆ ಬೀಜವನ್ನು ಸ್ವಲ್ಪ ಬಿಸಿ ಮಾಡಿ ಪುಡಿ ಮಾಡಿಟ್ಟುಕೊಳ್ಳಿ. ಇದನ್ನು ಬೆಳಿಗ್ಗೆ ಬಿಸಿ ಬಿಸಿ ನೀರಿಗೆ ಹಾಕಿ ಸೇವನೆ ಮಾಡಿ.
ಮುಷ್ಠಿಯಷ್ಟು ಮೆಂತೆ ತೆಗೆದುಕೊಂಡು ಅದನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ. ಇದ್ರಿಂದ ಹಸಿವು ಬೇಗ ಆಗುವುದಿಲ್ಲ. ತೂಕ ಇಳಿಸಲು ಸಹಾಯವಾಗುತ್ತದೆ.
ಒಂದು ಕಪ್ ಬಿಸಿ ನೀರಿಗೆ ಮೂರ್ನಾಲ್ಕು ಕಾಳು ಮೆಂತೆ ಹಾಕಿ. ಅದಕ್ಕೆ ದಾಲ್ಚಿನಿ ಹಾಗೂ ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಈ ಟೀ ಸೇವನೆ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.
ಒಂದು ಕಪ್ ಗ್ರೀನ್ ಟೀಗೆ ಜೇನುತುಪ್ಪ ಹಾಗೂ ನಿಂಬೆ ರಸವನ್ನು ಮಿಕ್ಸ್ ಮಾಡಿ. ಇದ್ರ ಮೇಲೆ ಮೆಂತೆ ಪುಡಿ ಹಾಕಿ. ಇದನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ತೂಕ ಕಡಿಮೆಯಾಗುತ್ತದೆ.