ಸ್ಥೂಲಕಾಯ ಸಮಸ್ಯೆ ಈಗ ಸಾಮಾನ್ಯ ಎನ್ನುವಂತಾಗಿದೆ. ಪ್ರತಿಯೊಬ್ಬರೂ ಬೊಜ್ಜಿನಿಂದ ಬಳಲುತ್ತಿದ್ದು, ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಾರೆ. ಸ್ಥೂಲಕಾಯ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಮಧುಮೇಹ ಹಾಗೂ ಹೃದ್ರೋಗ ಬಹುಬೇಗ ಕಾಡುತ್ತದೆ. ಆತ್ಮವಿಶ್ವಾಸವನ್ನು ಸ್ಥೂಲಕಾಯ ಕಡಿಮೆ ಮಾಡುತ್ತದೆ. ಈಗಿನ ದಿನಗಳಲ್ಲಿ ತೂಕ ಕಡಿಮೆ ಮಾಡಿಕೊಂಡು ಫಿಟ್ ಆಗಿರುವುದು ಬಹಳ ಮುಖ್ಯ. ತೂಕ ಇಳಿಸಿಕೊಳ್ಳಲು ಯೋಗ ಬೆಸ್ಟ್.
ತೂಕ ಕಡಿಮೆ ಮಾಡಿಕೊಳ್ಳಲು ಸೂರ್ಯ ನಮಸ್ಕಾರ ಬಹಳ ಪ್ರಯೋಜನಕಾರಿ. ಇದ್ರಲ್ಲಿ 12 ಆಸನಗಳಿರುತ್ತವೆ. ಇದ್ರ ಪ್ರಭಾವ ಇಡೀ ಶರೀರದ ಮೇಲಾಗುತ್ತದೆ. ಕುತ್ತಿಗೆಯ ಸ್ನಾಯುಗಳು, ಶ್ವಾಸಕೋಶಗಳು ಮತ್ತು ಪಕ್ಕೆಲುಬುಗಳನ್ನು ಬಲಗೊಳಿಸುತ್ತದೆ. ದೇಹದ ಕೊಬ್ಬು ಕಡಿಮೆಯಾಗುತ್ತದೆ.
ತೂಕವನ್ನು ಕಡಿಮೆ ಮಾಡಲು ನೆರವಾಗುವ ಆಸನಗಳಲ್ಲಿ ಭುಜಂಗಾಸನ ಕೂಡ ಒಂದು. ದಿನಕ್ಕೆ 10 ಬಾರಿ ಇದನ್ನು ಮಾಡುವುದ್ರಿಂದ ಹೊಟ್ಟೆ ಕೆಳಭಾಗದ ಬೊಜ್ಜು ಕಡಿಮೆಯಾಗುತ್ತದೆ.
ಧನುರಾಸನ ತೂಕ ಕಡಿಮೆ ಮಾಡುವ ಜೊತೆಗೆ ಸೊಂಟ, ಎದೆ ಭಾಗದ ಭಾರವನ್ನು ಕಡಿಮೆ ಮಾಡುತ್ತದೆ.
ತೂಕ ಕಡಿಮೆ ಮಾಡಲು ತ್ರಿಕೋನಾಸನ ಕೂಡ ಒಳ್ಳೆಯದು. ನಿಯಮಿತ ರೂಪದಲ್ಲಿ ಈ ಆಸನ ಮಾಡುವುದ್ರಿಂದ ನೀವು ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು.
ವೀರಭದ್ರಾಸನದಲ್ಲಿ ತೊಡೆ, ಹೊಟ್ಟೆ, ಮೊಲೆ ತೊಟ್ಟಿನ ಕೊಬ್ಬು ಕಡಿಮೆಯಾಗುತ್ತದೆ. ಆಂತರಿಕ ಶಕ್ತಿ ಹೆಚ್ಚಾಗುತ್ತದೆ. ದೀರ್ಘ ಸಮಯದವರೆಗೆ ಕೆಲಸ ಮಾಡಲು ಶಕ್ತಿ ಬರುತ್ತದೆ.