ದೇಹದ ತೂಕ ಹೆಚ್ಚಾಗುತ್ತಿದೆ ಎಂದಾಕ್ಷಣ ಡಯೆಟ್, ವ್ಯಾಯಾಮ, ಜಿಮ್ ಎಂದೆಲ್ಲಾ ತಲೆ ಕೆಡಿಸಿಕೊಳ್ಳುತ್ತೇವೆ. ದಿನೇ ದಿನೇ ಏರುತ್ತಿರುವ ತೂಕವನ್ನು ಇಳಿಸಿಕೊಳ್ಳುವುದೇ ಸವಾಲಿನ ಕೆಲಸ. ಇನ್ನು ಜಂಕ್ ಫುಡ್, ಸಿಹಿ ತಿನಿಸುಗಳನ್ನು ಬಿಡುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಹೇಗೆ ತೂಕ ಇಳಿಸಿಕೊಳ್ಳಲಿ ಎಂದು ಚಿಂತಿಸುವವರಿಗೆ ಇಲ್ಲಿದೆ ನೋಡಿ ಒಂದು ಸೂಪರ್ ಟಿಪ್ಸ್
ಬೇಕಾಗುವ ಸಾಮಾಗ್ರಿಗಳು: 3 ಕಪ್ ಕ್ಯಾಬೇಜ್ ತುರಿ, 6 ಕಪ್ ನೀರು, 5 ಬೀನ್ಸ್ ಚಿಕ್ಕದ್ದಾಗಿ ಕತ್ತರಿಸಿದ್ದು, ಒಂದು ಈರುಳ್ಳಿ ಸಣ್ಣದ್ದಾಗಿ ಹೆಚ್ಚಿಕೊಳ್ಳಿ, 4-5 ಬೆಳ್ಳುಳ್ಳಿ ಎಸಳು, 1 ಕ್ಯಾರೆಟ್,1 ಟೀ ಸ್ಪೂನ್ ಎಣ್ಣೆ, 1 ಟೀ ಸ್ಪೂನ್, ಕಾಳು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ಉಪ್ಪು.
ಮಾಡುವ ವಿಧಾನ: ಒಂದು ಅಗಲವಾದ ಪಾತ್ರೆಗೆ ಎಲ್ಲಾ ತರಕಾರಿಗಳನ್ನು ಹಾಕಿ ನೀರು ಹಾಕಿ ಚೆನ್ನಾಗಿ ಬೇಯಿಸಿ. 20 ನಿಮಿಷ ಹದವಾದ ಉರಿಯಲ್ಲಿ ಇದು ಬೇಯಲಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಕಾಳು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಸೇರಿಸಿ. ಬಿಸಿ ಬಿಸಿ ಇರುವಾಗಲೇ ಕುಡಿಯಿರಿ.
ಈ ಸೂಪ್ ಕಡಿಮೆ ಅವಧಿಯಲ್ಲಿ ನಿಮ್ಮ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಕ್ಯಾಬೇಜ್ ನಲ್ಲಿ ವಿಟಮಿನ್ಸ್ ಹಾಗೂ ಪೋಷಕಾಂಶಗಳು ಹೇರಳವಾಗಿದೆ. ಈ ಸೂಪ್ ಜತೆಗೆ ಹಣ್ಣಗಳನ್ನು ಸೇವಿಸುತ್ತಾ ಇರಿ.