ತೂಕ ಕಳೆದುಕೊಳ್ಳುವಲ್ಲಿ ಅನೇಕ ಪ್ರಯತ್ನ ನಡೆಸಿ ವಿಫಲನಾದ ವ್ಯಕ್ತಿಯೊಬ್ಬ ಕೊನೆಯ ಪ್ರಯತ್ನವಾಗಿ ತನ್ನ ಕುಟುಂಬ ತೊರೆದು ಅಂತಿಮ ಗುರಿ ಸಾಧಿಸುವಲ್ಲಿ ಸಫಲನಾಗಿದ್ದಾನೆ.
ಮಾಧ್ಯಮ ವರದಿ ಪ್ರಕಾರ, 2021 ರ ಅಂತ್ಯದ ವೇಳೆಗೆ ಬ್ರಿಯಾನ್ ಓ’ಕೀಫ್ ಎಂಬ ಐರಿಶ್ ವ್ಯಕ್ತಿ ಸುಮಾರು ಅಂದಾಜು 153 ಕೆಜಿ ತೂಕವನ್ನು ಹೊಂದಿದ್ದರು. ಆರೋಗ್ಯಕರ ಜೀವನ ಶೈಲಿಯನ್ನು ನಡೆಸಲು ನಿರ್ಧರಿಸಿದ ಬ್ರಿಯಾನ್, ಸ್ಪೇನ್‌ನ ಮಲ್ಲೋರ್ಕಾಗೆ ತೆರಳಲು ನಿರ್ಧರಿಸಿದರು. ಅವರು ಏಳು ತಿಂಗಳ ನಂತರ ಐರ್ಲೆಂಡ್‌ನ ಕಾರ್ಕ್‌ನಲ್ಲಿರುವ ತಮ್ಮ ಮನೆಗೆ ಹಿಂದಿರುಗಿದಾಗ, 62 ಕೆಜಿ ಕಳೆದುಕೊಂಡಿದ್ದರು.
ವರದಿಯ ಪ್ರಕಾರ, ಆತ ತನ್ನ ದೇಹದ ತೂಕವನ್ನು ಕಡಿಮೆ ಮಾಡಲು ಹಲವಾರು ರೀತಿ ಪ್ರಯತ್ನ ಮಾಡಿದ್ದನು. ಬ್ರಿಯಾನ್ ಸ್ಪೇನ್‌ಗೆ ತೆರಳುತ್ತಿದ್ದಂತೆ ಕುಟುಂಬ ಸದಸ್ಯರು ಮತ್ತು ಆಪ್ತರೊಂದಿಗೆ ಎಲ್ಲಾ ಸಂವಹನ ಸಂಬಂಧಗಳನ್ನು ಕಡಿತಗೊಳಿಸಿದರು.
ವ್ಯಾಯಾಮಗಳು ಮಾತ್ರವಲ್ಲದೆ ಆರೋಗ್ಯಕರ ಆಹಾರ ಕಾಪಾಡಿಕೊಳ್ಳುವುದು ಅವರ ತೂಕ ನಷ್ಟ ಪ್ರಯಾಣ ಪೂರ್ಣಗೊಳಿಸಲು ಅವರು ತೆಗೆದುಕೊಂಡ ಪ್ರಮುಖ ಹಂತಗಳಲ್ಲಿ ಒಂದಾಗಿತ್ತು.
ಆರು ತಿಂಗಳು 2,200 ಕ್ಯಾಲೋರಿ ಮಿತಿಯನ್ನು ಉಳಿಸಿಕೊಂಡಿದ್ದು ಅಂತಿಮ ತಿಂಗಳಲ್ಲಿ ಕ್ಯಾಲೊರಿಗಳ ಸೇವನೆ ಪ್ರತಿ ದಿನವೂ ಕಡಿಮೆಯಾಗುತ್ತಾ 1750 ಕ್ಯಾಲೊರಿ ತಲುಪಿತ್ತು.
ಅಲ್ಲದೇ ಅವರು ಆರಂಭಿಕ ಹಂತದಲ್ಲಿ ವಾಕಿಂಗ್, ವ್ಯಾಯಾಮ ಪ್ರಾರಂಭಿಸಿದರು, ನಂತರ ಅವರು ಪ್ರತಿದಿನ ಐದು ಗಂಟೆಗಳ ಕಾಲ ತೀವ್ರವಾಗಿ ವ್ಯಾಯಾಮ ಮಾಡಿದರು. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಕಠಿಣ ಪರಿಶ್ರಮದ ವಿವರಗಳನ್ನು ಹಂಚಿಕೊಳ್ಳುವಾಗ, ಬ್ರಿಯಾನ್ ಅವರು ಈ ಚಟುವಟಿಕೆಗೆ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಮೊದಲ ಎರಡು ವಾರಗಳವರೆಗೆ ದಿನಕ್ಕೆ ಸುಮಾರು 90 ನಿಮಿಷಗಳ ಕಾಲ ನಡೆಯಲು ಪ್ರಾರಂಭಿಸಿದರು, ಅದು ಐದು ಗಂಟೆಗಳ ತಾಲೀಮು ವಿಸ್ತರಣೆಗೊಂಡಿತು. ತಾಲೀಮು ದಿನಚರಿಯು ವಾರದಲ್ಲಿ ಸುಮಾರು ಆರು ದಿನಗಳವರೆಗೆ ಭಾರ ಎತ್ತುವಿಕೆಯನ್ನು ಒಳಗೊಂಡಿತ್ತು, ನಂತರ ವಾರಕ್ಕೆ ಮೂರು ಬಾರಿ ಈಜು ಮತ್ತು ಓಟ ಒಳಗೊಂಡಿತ್ತು.
ತೂಕ ನಷ್ಟದ ರೂಪಾಂತರವು ಸುಲಭವಲ್ಲ, ಮೂರು ತಿಂಗಳು ನಿದ್ರೆ, ತಿನ್ನುವುದು ಮತ್ತು ವ್ಯಾಯಾಮವನ್ನು ಹೊರತುಪಡಿಸಿ ಬೇರೇನೂ ಮಾಡಲು ಸಾಧ್ಯವಿಲ್ಲ ಎಂದು ಬ್ರಿಯಾನ್ ಹೇಳಿದರು.
ನಾಲ್ಕು ತಿಂಗಳ ನಂತರ ಅವರ ದೇಹ ಬದಲಾವಣೆಗೆ ಒಗ್ಗಿಕೊಂಡಿರಲಿಲ್ಲ. ಮೊದಲ ಮೂರು ತಿಂಗಳು ಊಟ, ನಿದ್ದೆ, ವ್ಯಾಯಾಮ ಬಿಟ್ಟರೆ ಬೇರೇನೂ ಮಾಡಲಾಗಲಿಲ್ಲ. ಉಳಿದ ಸಮಯದಲ್ಲಿ, ನಾನು ನನ್ನ ಸೋಫಾದಲ್ಲಿ ಮಲಗಿದ್ದೆ. 4ನೇ ತಿಂಗಳ ನಂತರ ದೇಹವು ಒಗ್ಗಿಕೊಂಡಿತು ಎಂದು ವಿವರಿಸಿದರು.