ಮೊಟ್ಟೆಯಲ್ಲಿ ಸಾಕಷ್ಟು ಪ್ರೋಟೀನ್ ಇರುತ್ತೆ ಎಂಬುದು ಎಲ್ಲರಿಗೂ ಗೊತ್ತು.ಇದು ದೇಹದ ಚಯಾಪಚಯವನ್ನು ಸುಧಾರಿಸುತ್ತದೆ. ಹಾಗಾಗಿ ಮೊಟ್ಟೆ ತಿಂದ್ರೆ ಆರೋಗ್ಯ ಸುಧಾರಿಸುತ್ತದೆ. ತೂಕ ಇಳಿಸುವ ವಿಚಾರಕ್ಕೆ ಬಂದ್ರೆ ಅನೇಕರಿಗೆ ಮೊಟ್ಟೆ ತೂಕ ಇಳಿಸಲು ಸಹಾಯ ಮಾಡುತ್ತೆ ಎಂಬ ಸಂಗತಿ ತಿಳಿದಿಲ್ಲ. ಆಹಾರವನ್ನು ಬಿಟ್ಟು ನೀವು ತೂಕ ಇಳಿಸಿಕೊಳ್ಳಬೇಕಾಗಿಲ್ಲ. ಮೊಟ್ಟೆಯನ್ನು ಸರಿಯಾದ ಕ್ರಮದಲ್ಲಿ ಸೇವನೆ ಮಾಡಿದ್ರೂ ನಿಮ್ಮ ತೂಕ ಇಳಿಯುತ್ತದೆ.
ಮೊಟ್ಟೆಯನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಆಮ್ಲೆಟ್ ತಯಾರಿಸುತ್ತಾರೆ. ಆದ್ರೆ ಆಮ್ಲೆಟ್ ತೂಕ ಇಳಿಸಿಕೊಳ್ಳಲು ಸಹಾಯಕಾರಿ ಎಂಬುದು ಅನೇಕರಿಗೆ ತಿಳಿದಿಲ್ಲ. ತೂಕ ಇಳಿಸಿಕೊಳ್ಳಲು ನೀವು ಬಯಸಿದ್ದರೆ ಆಮ್ಲೆಟ್ ತಿನ್ನಿ. ಆಮ್ಲೆಟ್ ಮಾಡುವ ವೇಳೆ ಕಡಿಮೆ ಪ್ರಮಾಣದಲ್ಲಿ ಎಣ್ಣೆ ಬಳಸಿ. ನಿಯಮಿತವಾಗಿ ಆಮ್ಲೆಟ್ ಸೇವನೆ ಮಾಡಿ.
ಬೀನ್ಸ್ ನಮ್ಮ ಆರೋಗ್ಯ ವೃದ್ಧಿಸುತ್ತದೆ. ಬೊಜ್ಜು ಕಡಿಮೆ ಮಾಡಿ ತೂಕ ಇಳಿಸಿಕೊಳ್ಳಲು ಬೀನ್ಸ್ ಜೊತೆ ಮೊಟ್ಟೆ ಬಳಸಿ ಆಹಾರ ತಯಾರಿಸಬಹುದು. ಇದು ಆರೋಗ್ಯಕ್ಕೂ ಒಳ್ಳೆಯದು. ಬಾಯಿಗೂ ರುಚಿ. ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ.