alex Certify ತೂಕ ಇಳಿಸಿಕೊಳ್ಳಲು ನೆರವಾಗುತ್ತಾ ಕಾಫಿ ಜೊತೆಗೆ ನಿಂಬೆ ಜ್ಯೂಸ್….? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸಿಕೊಳ್ಳಲು ನೆರವಾಗುತ್ತಾ ಕಾಫಿ ಜೊತೆಗೆ ನಿಂಬೆ ಜ್ಯೂಸ್….? ಇಲ್ಲಿದೆ ಮಾಹಿತಿ

ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಉಪಯುಕ್ತವಾದ ಮಾಹಿತಿಗಳು ಬೆಳಕಿಗೆ ಬರುತ್ತವೆ. ಕೆಲವು ನಾವು ತಯಾರಿಸುವಂತಿದ್ದರೆ, ಇನ್ನೂ ಕೆಲವು ನೋಡಿದ್ರೆ ದಿಗ್ಭ್ರಮೆ ಮೂಡಿಸುವಂತಿರುತ್ತದೆ. ಅದರಲ್ಲೂ ದಪ್ಪಗಿರುವವರು ಸಣ್ಣಗಾಗುವುದು ಹೇಗೆ ಎಂಬಂತೆಲ್ಲಾ ವಿಡಿಯೋಗಳು ಬಹಳಷ್ಟಿವೆ. ಹಲವಾರು ಸೈಟ್ ಗಳು ಈ ಬಗ್ಗೆ ಮಾಹಿತಿ ನೀಡುತ್ತವೆ.

ಇದೀಗ, ಟಿಕ್ ಟಾಕ್ ನಲ್ಲಿ ತೂಕ ನಷ್ಟಕ್ಕೆ ಕಾಫಿ ಮತ್ತು ನಿಂಬೆ ಮಿಶ್ರಣ ಮಾಡುವ ವಿಡಿಯೋ ವೈರಲ್ ಆಗಿದೆ. ಈ ಟಿಕ್ ಟಾಕ್ ಚಾಲೆಂಜ್ ತುಂಬಾ ಸರಳವೆಂದು ತೋರುತ್ತದೆಯಾದರೂ, ಪೌಷ್ಟಿಕತಜ್ಞ ರುತ್ ಟಂಗ್ ಇದು ತೂಕವನ್ನು ಕಳೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ.

ನಿಂಬೆಹಣ್ಣಿನಲ್ಲಿ ಯಾವುದೇ ತೂಕ ನಷ್ಟಕ್ಕೆ ಕಾರಣವಾಗುವಂತಹ ಅಂಶಗಳಿಲ್ಲ. ಆದರೆ, ಕೆಫೀನ್ ಹೊಂದಿರುವ ಪಾನೀಯಗಳು ಹೃದಯ ಬಡಿತವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸುತ್ತವೆ. ವ್ಯಾಯಾಮ ಮಾಡುವಾಗ ಕೊಬ್ಬು ಬರ್ನ್ ಮಾಡಬಹುದು ಎಂದು ವಿವರಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವಿಡಿಯೋವನ್ನು ಹೊರತುಪಡಿಸಿ, ಮಾನವರಲ್ಲಿ ತೂಕ ನಷ್ಟದ ಮೇಲೆ ನಿಂಬೆಹಣ್ಣುಗಳ ಪರಿಣಾಮಗಳ ಬಗ್ಗೆ ಯಾವುದೇ ಅಧ್ಯಯನಗಳಿಲ್ಲ ಎಂದು ಡಾ. ಡೆಬೊರಾ ಲೀ ಸ್ಪಷ್ಟನೆ ನೀಡಿದ್ದಾರೆ.

ನಿಂಬೆ ಕಾಫಿ ತೂಕ ನಷ್ಟಕ್ಕೆ ಕೊಡುಗೆ ನೀಡುವುದಿಲ್ಲ ಎಂದು ತಜ್ಞರು ವಿವರಿಸಿದ್ದರೂ, ನಿಂಬೆ ಮತ್ತು ಕಾಫಿ ಎರಡೂ ತಮ್ಮದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ನಿಂಬೆಹಣ್ಣುಗಳು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ. ದೇಹಕ್ಕೆ ಅಗತ್ಯವಾದ ಉತ್ಕರ್ಷಣ ನಿರೋಧಕಗಳು ಮತ್ತು ರೋಗನಿರೋಧಕ ಶಕ್ತಿಗೆ ಅಗತ್ಯವಾದ ಖನಿಜಗಳನ್ನು ಒದಗಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...