
ಆರೋಗ್ಯ ಕಾಪಾಡಿಕೊಳ್ಳಲು ಜನರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಫಿಟ್ನೆಸ್ ಬಹುತೇಕರ ಜೀವನದ ಪ್ರಮುಖ ಭಾಗವಾಗಿದೆ. ಫಿಟ್ ಆಗಿರಲು ಹಾಗೂ ಚೆನ್ನಾಗಿ ಕಾಣಲು ಜನರು ಸಾಕಷ್ಟು ವ್ಯಾಯಾಮಗಳನ್ನು ಮಾಡ್ತಾರೆ. ಜಿಮ್ ನಲ್ಲಿ ಬೆವರಿಳಿಸ್ತಾರೆ.
ಫಿಟ್ನೆಸ್ ಗಾಗಿ ವ್ಯಾಯಾಮ ಮಾಡುವ ಮೊದಲು ಯಾವ ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದು, ಯಾವುದು ಹಾನಿಕರ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಕೆಲ ವರ್ಷಗಳ ಹಿಂದೆ ಸಿಟ್-ಅಪ್ ವ್ಯಾಯಾಮ ತೂಕ ಇಳಿಸಿಕೊಳ್ಳಲು ಒಳ್ಳೆಯದು ಎನ್ನಲಾಗ್ತಾಯಿತ್ತು.
ಈ ವ್ಯಾಯಾಮದಲ್ಲಿ ಕಿಬ್ಬೊಟ್ಟೆ ಸ್ನಾಯುಗಳ ಮೇಲೆ ಒತ್ತಡ ಬೀಳುತ್ತದೆ. ಆದ್ರೆ ಇತ್ತೀಚಿಗೆ ನಡೆದ ಅಧ್ಯಯನವೊಂದು ಸಿಟ್-ಅಪ್ ವ್ಯಾಯಾಮ ಆರೋಗ್ಯಕ್ಕೆ ಹಾನಿಕರ ಎಂದಿದೆ.
ಈ ವ್ಯಾಯಾಮ ಮಾಡಿ ಅನೇಕರು ಗಂಭೀರ ಗಾಯಗೊಂಡಿದ್ದಾರಂತೆ. ಕಿಬ್ಬೊಟ್ಟೆ, ಹೊಟ್ಟೆ ಮೇಲೆ ಒತ್ತಡ ಬೀಳುವ ಕಾರಣ ಸ್ನಾಯುಗಳ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆಯಂತೆ.
ಇದಲ್ಲದೆ ಸಿಟ್-ಅಪ್ ವ್ಯಾಯಾಮವನ್ನು ನಿರಂತರವಾಗಿ ಮಾಡಿದ್ರೂ ಹೊಟ್ಟೆ ಬೊಜ್ಜು ಕರಗಲಿಲ್ಲವೆಂದು ಮತ್ತೊಂದು ವರದಿಯಲ್ಲಿ ಹೇಳಲಾಗಿದೆ.