ಹೊಟ್ಟೆ, ಪಚನ ಕ್ರಿಯೆ ಸರಿಯಾಗಿದ್ದರೆ ಆರೋಗ್ಯ ಬಹುತೇಕ ಸರಿಯಿದ್ದಂತೆ. ಹೊಟ್ಟೆ ಕೆಟ್ಟರೆ ಅನೇಕ ಸಮಸ್ಯೆ ಕಾಡುತ್ತದೆ. ಮಧುಮೇಹ, ನಿದ್ರಾಹೀನತೆ ಮತ್ತು ಹೃದಯದ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು. ಇದಲ್ಲದೆ ಬೊಜ್ಜು ಸರ್ವೆ ಸಾಮಾನ್ಯವಾಗುತ್ತದೆ.
ಒಮ್ಮೆ ತೂಕ ಏರಿದ್ರೆ ಅದನ್ನು ಇಳಿಸುವುದು ಬಹಳ ಕಷ್ಟ. ತೂಕ ಇಳಿಸಿಕೊಳ್ಳಲು ಮುಖ್ಯವಾಗಿ ನಮ್ಮ ಆಹಾರಕ್ರಮ ಬದಲಾಯಿಸಿಕೊಳ್ಳಬೇಕು. ವ್ಯಾಯಾಮ ಕೂಡ ಅತ್ಯಗತ್ಯ.
ಶೇಂಗಾ ಬೆಣ್ಣೆಯಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದ್ದು, ಇದನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು.
ಕರಿಮೆಣಸಿನ ಸೇವನೆಯೂ ತೂಕ ಇಳಿಸಿಕೊಳ್ಳಲು ಒಳ್ಳೆಯದು. ತೂಕ ಕಡಿಮೆ ಮಾಡಲು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಇದೂ ಒಂದು. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಕರಿಮೆಣಸು ಚಯಾಪಚಯ ಕ್ರಿಯೆಯ ಶಕ್ತಿ ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.
ಹಸಿರು ಬಟಾಣಿ ಕೂಡ ಬಹಬೇಗನೆ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ಹಸಿರು ಬಟಾಣಿಯಲ್ಲಿ ಪ್ರೋಟೀನ್, ವಿಟಮಿನ್ ಸಿ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕಬ್ಬಿಣದ ಅಂಶಗಳಿವೆ. ಇವು ದೇಹದ ಫ್ಯಾಟ್ ಬರ್ನ್ ಮಾಡಲು ಹೆಚ್ಚು ಸಹಾಯಕವಾಗಿದೆ.