ತೂಕ ಜಾಸ್ತಿ ಅಂತ ಚಿಂತೆ ಮಾಡೋ ಬದಲು ತೂಕ ಕಡಿಮೆ ಮಾಡಿಕೊಳ್ಳೋದು ಒಳ್ಳೇದು. ಬೊಜ್ಜು ಕರಗಿಸಲು ಇಲ್ಲಿದೆ ಸರಳ ವಿಧಾನ.
ಕೆಲವೊಮ್ಮೆ ನಾವು ಮಾಡುವ ಡಯಟ್ ಕೂಡ ಯಾವುದೇ ಪರಿಣಾಮ ಬೀರೋದಿಲ್ಲ. ಅಂತಹ ಸಮಯದಲ್ಲಿ ಬೆಳಗ್ಗೆ ಎದ್ದ ತಕ್ಷಣ 2 ಲೋಟ ಬೆಚ್ಚಗಿನ ನೀರು ಕುಡಿಯಿರಿ. ಇದ್ರಿಂದ ದೇಹದಲ್ಲಿ ನೀರಿನಂಶ ಸರಿ ಪ್ರಮಾಣದಲ್ಲಿ ಇರುವುದಲ್ಲದೆ ಹೊಟ್ಟೆಯ ಆರೋಗ್ಯ ಕೂಡ ಸುಧಾರಿಸುತ್ತದೆ.
ನೀರು ದೇಹದಲ್ಲಿರುವ ಟಾಕ್ಸಿನ್ಸ್ ಅಂಶವನ್ನು ಹೊರಹಾಕಿ, ಮೆಟಾಬಾಲಿಸಮ್ ಹೆಚ್ಚಿಸುತ್ತದೆ. ಇದ್ರಿಂದ ದೇಹದ ತೂಕ ಇಳಿಯಲು ನೆರವಾಗುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ಚಹಾ ಮತ್ತು ಕಾಫಿ ಕುಡಿಯುವ ಅಭ್ಯಾಸ ಅನೇಕರಿಗಿರುತ್ತದೆ. ಇದ್ರ ಬದಲು ಬೆಚ್ಚಗಿನ ನೀರಿಗೆ ಲಿಂಬೂ, ಜೇನುತುಪ್ಪ ಮತ್ತು ದಾಲ್ಚಿನಿ ಹಾಕಿ ಕುಡಿಯಿರಿ. ಇದು ತೂಕ ಕಡಿಮೆ ಮಾಡಲು ಸಹಕಾರಿ. ಆ್ಯಂಟಿ ಆಕ್ಸಿಡೆಂಟ್ ಹೆಚ್ಚಿರುವ ಈ ಪಾನೀಯ ದೇಹದ ತೂಕ ಇಳಿಸಿಕೊಳ್ಳಲು ಸಹಾಯಕ.
ಹೆಚ್ಚಿನ ಒತ್ತಡ ಮತ್ತು ನಿದ್ರೆಗೆಡುವುದರಿಂದ ಬೊಜ್ಜು ಜಾಸ್ತಿಯಾಗುತ್ತದೆ. ಬೆಳಗ್ಗೆ ಧ್ಯಾನ ಮಾಡಿ. ಸಮಯಕ್ಕೆ ಸರಿಯಾದ ನಿದ್ದೆ ಹಾಗೂ ಕಡಿಮೆ ಮಾನಸಿಕ ಒತ್ತಡ ನಿಮ್ಮ ತೂಕ ಸಮನಾಗಿರುವಂತೆ ಮಾಡುತ್ತದೆ.