ಫಾಸ್ಟ್ ಫುಡ್ ದಿನದಿಂದ ದಿನಕ್ಕೆ ನಮ್ಮ ಆಹಾರದ ಭಾಗವಾಗುತ್ತಿದೆ. ನಮ್ಮ ದೇಹವನ್ನು ಒಳಗಿನಿಂದ ಟೊಳ್ಳಾಗಿಸುತ್ತಿದೆ. ಅವುಗಳಲ್ಲಿ ಪೋಷಕಾಂಶಗಳಿರುವುದಿಲ್ಲ. ಫಾಸ್ಟ್ ಫುಡ್ ಅನ್ನು ಜೀರ್ಣಿಸಿಕೊಳ್ಳಲು ಬಹಳ ಸಮಯ ಬೇಕು. ಕೆಟ್ಟ ಜೀವನಶೈಲಿಯಿಂದಾಗಿ ಬೊಜ್ಜಿನ ಸಮಸ್ಯೆ ಈಗ ಸಾಮಾನ್ಯವಾಗಿದೆ. ಹಾಗಾಗಿ ಫಿಟ್‌ನೆಸ್ ಕಾಪಾಡಿಕೊಳ್ಳುವುದು ಕಷ್ಟ. ಕೆಲವೊಂದು ಸರಳ ಸಲಹೆಗಳನ್ನು ಅಳವಡಿಸಿಕೊಂಡರೆ ದೇಹವು ಫಿಟ್ ಆಗಿರುತ್ತದೆ. ಅವು ಯಾವುವು ಅನ್ನೋದನ್ನು ನೋಡೋಣ.
ಲಘುವಾದ ಭೋಜನ
ಸಂಶೋಧನೆಯ ಪ್ರಕಾರ ರಾತ್ರಿ ಲಘು ಭೋಜನ ಮಾಡುವುದರಿಂದ ದೇಹವು ಫಿಟ್ ಆಗಿರುತ್ತದೆ. ಆದರೆ ಬೆಳಗಿನ ಉಪಹಾರ ಹೆವಿ ಆಗಿರಲಿ. ನೀವು ಸ್ಥೂಲಕಾಯತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ರಾತ್ರಿ ಲಘು ಭೋಜನವನ್ನು ಸೇವಿಸಲು ಪ್ರಾರಂಭಿಸಿ. ಇದರಿಂದ ದೇಹದ ಚಯಾಪಚಯ ದರವು ಚೇತರಿಸಿಕೊಳ್ಳಲು ಪ್ರಾರಂಭಿಸುತ್ತದೆ. ಜೀರ್ಣಶಕ್ತಿ ಹೆಚ್ಚುತ್ತದೆ. ರಾತ್ರಿ ಲಘುವಾದ ಭೋಜನವನ್ನು ತೆಗೆದುಕೊಳ್ಳುವುದರಿಂದ ಒತ್ತಡವನ್ನು ದೂರವಿಡಬಹುದು ಮತ್ತು ಮೂಡ್ ಸ್ವಿಂಗ್‌ಗಳ ಸಮಸ್ಯೆ ಇರುವುದಿಲ್ಲ. ಆದರೆ ರಾತ್ರಿಯ ಊಟವನ್ನು ಬಿಡಬೇಡಿ.
ಇದಕ್ಕೆ ವ್ಯತಿರಿಕ್ತವಾಗಿ, ಕೆಲವರು ರಾತ್ರಿ ಆಹಾರವನ್ನು ಸೇವಿಸುವುದನ್ನೇ ಬಿಟ್ಟುಬಿಡುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ದೇಹದ ತೂಕ ಹೆಚ್ಚಾಗಬಹುದು. ಏಕೆಂದರೆ ಈ ಸಮಯದಲ್ಲಿ ದೇಹವು ಹಸಿವಿನ ಮೋಡ್‌ಗೆ ಹೋಗುತ್ತದೆ ಮತ್ತು ಕೊಬ್ಬು ದೇಹದಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ರಾತ್ರಿಯಲ್ಲಿ ಆಹಾರವನ್ನು ಸೇವಿಸದಿದ್ದರೆ ಮೂಡ್ ಸ್ವಿಂಗ್‌ನ ಸಮಸ್ಯೆ ಕಂಡುಬರುತ್ತದೆ. ಇದರಿಂದಾಗಿ ನೀವು ನಿರಂತರವಾಗಿ ಕಿರಿಕಿರಿ ಅನುಭವಿಸುತ್ತೀರಿ. ಆದ್ದರಿಂದ ರಾತ್ರಿ ಊಟವನ್ನು ಸಂಪೂರ್ಣವಾಗಿ ಬಿಡುವ ಬದಲು, ಲಘು ಆಹಾರವನ್ನು ತೆಗೆದುಕೊಳ್ಳಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ.