![](https://kannadadunia.com/wp-content/uploads/2019/01/5-high-calorie-foods-for-healthy-weight-gain-compressed-1024x683.jpg)
ಡಯಟ್ ಅಂದ ತಕ್ಷಣ ಮೊದಲು ನಮ್ಮ ಮನಸ್ಸಿಗೆ ಬರೋದು ಕ್ಯಾಲೋರಿ. ಜಾಸ್ತಿ ಕ್ಯಾಲೋರಿ ಇರೋ ಪದಾರ್ಥಗಳನ್ನು ತಿಂದ್ರೆ ದಪ್ಪಗಾಗ್ತೀವಿ ಅನ್ನೋ ಆತಂಕ. ಹಾಗಾಗಿ ಡಯಟ್ ಚಕ್ಕರ್ ನಲ್ಲಿ ಎಲ್ರೂ ಕಡಿಮೆ ಕ್ಯಾಲೋರಿ ಇರೋ ತಿನಿಸುಗಳನ್ನೇ ಆಯ್ಕೆ ಮಾಡಿಕೊಳ್ತಾರೆ.
ಆದ್ರೆ ಹೆಚ್ಚು ಕ್ಯಾಲೋರಿ ಇರುವ ಆಹಾರಗಳು ನಮ್ಮ ದೇಹಕ್ಕೆ ಅತ್ಯಂತ ಅವಶ್ಯಕ. ಅವುಗಳಿಂದ ತೂಕವನ್ನು ಕೂಡ ಇಳಿಸಬಹುದು. ತೂಕ ಇಳಿಕೆಗೆ ಅಗತ್ಯವಾದ ಹೈ ಕ್ಯಾಲೋರಿ ಇರುವ ಪದಾರ್ಥಗಳು ಯಾವುದು ಅನ್ನೋದನ್ನು ನೋಡೋಣ.
ತುಪ್ಪ : ಇದರಲ್ಲಿ ಒಳ್ಳೆಯ ಕೊಬ್ಬಿನ ಅಂಶವಿದೆ, ಪೌಷ್ಠಿಕವಾದ ಕ್ಯಾಲೋರಿ ಉಳ್ಳ ಪದಾರ್ಥ ಇದು. ಪ್ರತಿದಿನ ಒಂದು ಚಮಚ ತುಪ್ಪ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರೋ ಅಧಿಕ ಕ್ಯಾಲೋರಿ ನಿಮ್ಮ ತೂಕ ಇಳಿಕೆಯ ವೇಗವನ್ನು ಹೆಚ್ಚಿಸುತ್ತೆ.
ಬಾಳೆಹಣ್ಣು : ಇದರಲ್ಲೂ ಕ್ಯಾಲೋರಿ ಹೆಚ್ಚಿದೆ, ಆದ್ರೆ ತೂಕ ಇಳಿಕೆಗೆ ಇದು ಬೆಸ್ಟ್ ಫುಡ್. ವರ್ಕೌಟ್ ಗೆ ಮೊದಲು ಅಥವಾ ನಂತರ ಯಾವಾಗ ಬೇಕಾದ್ರೂ ಬಾಳೆಹಣ್ಣನ್ನು ಸೇವಿಸಬಹುದು.
ಕೊಬ್ಬಿನ ಅಂಶವಿರುವ ಹಾಲು : ಸೂಪರ್ ಮಾರ್ಕೆಟ್ ಗೆ ಕಾಲಿಟ್ಟಾಗಲೆಲ್ಲಾ ನಾವು ಸ್ಕಿಮ್ಡ್, ಲೋ ಫ್ಯಾಟ್, ಫ್ಯಾಟ್ ಫ್ರೀ ಮತ್ತು ಸಾವಯವ ವಸ್ತುಗಳನ್ನೇ ಹುಡುಕುತ್ತೇವೆ. ಆದ್ರೆ ನೀವೇನಾದ್ರೂ ತೂಕ ಇಳಿಸುವ ಪ್ರಯತ್ನದಲ್ಲಿದ್ರೆ ಫುಲ್ ಫ್ಯಾಟ್ ಮಿಲ್ಕ್ ಅನ್ನೇ ಸೇವಿಸಿ. ಇದು ನಿಮಗೆ ಅಗತ್ಯ ಪೋಷಕಾಂಶವನ್ನು ಕೊಡುತ್ತದೆ ಜೊತೆಗೆ ಬ್ಯಾಡ್ ಫ್ಯಾಟ್ ಅನ್ನು ದೇಹದಿಂದ ಹೊರಹಾಕಲು ಸಹಕರಿಸುತ್ತದೆ.
ಮೊಟ್ಟೆಯ ಹಳದಿ ಭಾಗ : ಸಾಮಾನ್ಯವಾಗಿ ಎಲ್ಲರೂ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ತಿನ್ನುತ್ತಾರೆ. ಮೊಟ್ಟೆಯ ಹಳದಿ ಭಾಗದಲ್ಲಿ ಜಾಸ್ತಿ ಕ್ಯಾಲೋರಿ ಇರೋದ್ರಿಂದ ದಪ್ಪಗಾಗಿಬಿಡ್ತೀವಿ ಅನ್ನೋದು ಅವರ ಆತಂಕ. ಆದ್ರೆ ಮೊಟ್ಟೆಯ ಹಳದಿ ಭಾಗದಲ್ಲಿ ಅತ್ಯಧಿಕ ಪೋಷಕಾಂಶವಿರುತ್ತದೆ. ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಇದರಿಂದ ನೀವು ವರ್ಕೌಟ್ ಚೆನ್ನಾಗಿ ಮಾಡಬಹುದು, ಕ್ಯಾಲೋರಿ ಬರ್ನ್ ಕೂಡ ಮಾಡಬಹುದು.
ನಟ್ಸ್ : ನಟ್ಸ್ ತೂಕ ಇಳಿಸಲು ಬೆಸ್ಟ್ ಫುಡ್ ಅನ್ನೋದನ್ನು ಎಲ್ರೂ ಒಪ್ಪಿಕೊಳ್ತಾರೆ. ಆದ್ರೆ ಗೋಡಂಬಿ ತಿಂದ್ರೆ ತೂಕ ಹೆಚ್ಚಾಗುತ್ತೆ ಅನ್ನೋ ಭಾವನೆ ಕೆಲವರಲ್ಲಿದೆ. ಆದ್ರೆ ನಟ್ಸ್ ಪೋಷಕಾಂಶಗಳ ಆಗರ, ಮಧ್ಯಾಹ್ನ ಒಂದು ಕಪ್ ಲೋ ಫ್ಯಾಟ್ ಮೊಸರು ಸೇವಿಸುವ ಬದಲು ಒಂದು ಮುಷ್ಟಿ ನಟ್ಸ್ ತಿನ್ನಿ.
ಎಣ್ಣೆ : ಹಾಲಿನಂತೆ ವೆರೈಟಿ ಎಣ್ಣೆಗಳು ಕೂಡ ಮಾರ್ಕೆಟ್ ನಲ್ಲಿ ಲಭ್ಯವಿವೆ. ಫ್ಯಾಟ್ ಫ್ರೀ ಆಯಿಲ್, ಲೋ ಫ್ಯಾಟ್ ಆಯಿಲ್, ನೋ ಗ್ರೀಸ್ ಆಯಿಲ್ ಹೀಗೆ ಹತ್ತಾರು ಬಗೆಯ ಎಣ್ಣೆಗಳನ್ನು ಜನರು ಖರೀದಿಸ್ತಾರೆ. ಆದ್ರೆ ಸಂಪೂರ್ಣವಾಗಿ ಎಣ್ಣೆ ಸೇವನೆಯನ್ನೇ ತ್ಯಜಿಸಬೇಡಿ, ಯಾಕಂದ್ರೆ ನಮ್ಮ ದೇಹ ಅದಕ್ಕೆ ಹೊಂದಿಕೊಂಡಿರುತ್ತದೆ.
ಕಡಲೆಕಾಯಿ ಬೆಣ್ಣೆ : ತೂಕ ಇಳಿಸಲು ಇಚ್ಛಿಸುವವರಿಗೆ ಮನೆಯಲ್ಲೇ ಮಾಡಿದ ಪೀನಟ್ ಬಟರ್ ಬೆಸ್ಟ್ ಆಪ್ಷನ್. ನಿಮ್ಮ ದೇಹದಲ್ಲಿರುವ ಬೇಡವಾದ ಕೊಬ್ಬು ಮತ್ತು ಕ್ಯಾಲೋರಿಯನ್ನು ಹೊರಹಾಕಲು ಕಡಲೆಕಾಯಿ ಬೆಣ್ಣೆ ಸಹಕಾರಿಯಾಗಿದೆ.