ಬೇಕಾಗುವ ಸಾಮಗ್ರಿ : ಸೌತೆಕಾಯಿ, ಕ್ಯಾರೆಟ್, ಈರುಳ್ಳಿ ತಲಾ 1/2 ಕಪ್, ಟೊಮ್ಯಾಟೋ 1, ಹಸಿರು ಮೆಣಸಿನಕಾಯಿ 1, ರುಚಿಗೆ ತಕ್ಕಷ್ಟು ಉಪ್ಪು, ನಿಂಬು ರಸ 1 ಚಮಚ, ಕೊತ್ತಂಬರಿ ಸೊಪ್ಪು, ಪುದೀನಾ ಎಲೆ, ಸ್ವಲ್ಪ
ಮಾಡುವ ವಿಧಾನ : ಎಲ್ಲಾ ತರಕಾರಿಗಳನ್ನ ಬೆಚ್ಚನೆಯ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ಅಗತ್ಯಕ್ಕೆ ತಕ್ಕಂತೆ ಎಲ್ಲಾ ತರಕಾರಿಗಳನ್ನ ಸಣ್ಣಕೆ ಹೆಚ್ಚಿಕೊಳ್ಳಿ. ಒಂದು ಬೌಲ್ನಲ್ಲಿ ಈ ಎಲ್ಲಾ ಕತ್ತರಿಸಿದ ತರಕಾರಿಗಳನ್ನ ಹಾಕಿ. ಇದಕ್ಕೆ ಉಪ್ಪು ಹಾಗೂ ನಿಂಬೆ ರಸವನ್ನ ಸೇರಿಸಿ. ಸಲಾಡ್ ರೆಡಿಯಾಗುತ್ತಿದ್ದಂತೆಯೇ ಸವಿಯಲು ನೀಡಿ. ಇದಕ್ಕೆ ಬೇಕಿದ್ದರೆ ನೀವು ಮೊಳಕೆ ಬರಿಸಿದ ಕಾಳುಗಳನ್ನೂ ಸೇರಿಸಬಹುದು.
ಸಲಾಡ್ ರೆಡಿಯಾಗುತ್ತಿದ್ದಂತೆಯೇ ಸವಿಯಲು ನೀಡೋದ್ರಿಂದ ತರಕಾರಿಯ ಹಸಿವಾಸನೆ ಮೂಗಿಗೆ ಬಡಿಯೋದಿಲ್ಲ. ಅಲ್ಲದೇ ನಿಂಬೆರಸ ಕೂಡ ತರಕಾರಿಯ ಹಸಿ ವಾಸನೆಯನ್ನ ಹೋಗಲಾಡಿಸುವಲ್ಲಿ ಹೆಚ್ಚು ಸಹಕಾರಿ. ತೂಕ ಇಳಿಸಿಲು ಪ್ರಯತ್ನ ಮಾಡುತ್ತಿರುವವರು ಈ ವೆಜಿಟೇಬಲ್ ಸಲಾಡ್ ಟ್ರೈ ಮಾಡೋದ್ರಿಂದ ತೂಕ ಇಳಿಯೋದ್ರ ಜೊತೆಗೆ ಅಗತ್ಯ ಪೋಷಕಾಂಶ ಸಿಗಲಿದೆ.