ತೂಕ ಇಳಿಸಿಕೊಳ್ಳಲು ಜನರಿಗೆ ಕೊಬ್ಬಿನ ಆಹಾರ ಕಡಿಮೆ ಮಾಡಿ ಪ್ರೋಟೀನ್ ಯುಕ್ತ ಆಹಾರ ವನ್ನು ಸೇವಿಸಲು ಸೂಚಿಸಲಾಗುತ್ತದೆ. ಅನೇಕ ಜನರು ತೂಕ ಇಳಿಸುವ ಪ್ರಯತ್ನದಲ್ಲಿ ಹೆಚ್ಚು ಪ್ರೋಟೀನ್ ಸೇವಿಸುತ್ತಾರೆ. ಆದರೆ ಪ್ರೋಟೀನ್ ಆರೋಗ್ಯಕ್ಕೆ ಉತ್ತಮವಾದರೂ ಅತಿಯಾಗಿ ಸೇವಿಸಿದರೆ ಈ ಸಮಸ್ಯೆಗಳು ಕಾಡುತ್ತದೆ.
*ಪ್ರೋಟೀನ್ ಅಧಿಕವಾಗಿ ಸೇವಿಸಿದರೆ ಅದು ದೇಹದಲ್ಲಿ ಕೊಬ್ಬಿನಂತೆ ಸಂಗ್ರಹವಾಗಿ ತೂಕ ಹೆಚ್ಚಾಗುತ್ತದೆ. ಅಲ್ಲದೇ ಪ್ರೋಟೀನ್ ಸೇವಿಸಲು ಪ್ರಯತ್ನಿಸುವ ಮೂಲಕ ಹೆಚ್ಚುವರಿ ಕ್ಯಾಲೋರಿ ದೇಹ ಸೇರುತ್ತದೆ.
*ಪ್ರೋಟೀನ್ ಹೆಚ್ಚಾದಾಗ ಉಸಿರಾಟದಲ್ಲಿ ವಾಸನೆ ಹೊರಹೊಮ್ಮುತ್ತದೆ. ಯಾಕೆಂದರೆ ಇದು ಚಯಾಪಚಯ ಕ್ರಿಯೆಗೆ ತಲುಪಿ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ. ಇದರಿಂದ ಉಸಿರಾಟದಲ್ಲಿ ವಾಸನೆ ಬರುತ್ತದೆ.
*ಪ್ರೋಟೀನ್ ಸೇವನೆಯಿಂದ ದೇಹದಲ್ಲಿ ನಾರಿನಾಂಶದ ಕೊರತೆ ಉಂಟಾಗಿ ಮಲಬದ್ಧತೆ ಸಮಸ್ಯೆ ಕಾಡುತ್ತದೆ.
*ಪ್ರೋಟೀನ್ ಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹದಲ್ಲಿ ಫೈಬರ್ ಅಂಶ ಕಡಿಮೆಯಾಗಿ ಅತಿಸಾರ ಸಮಸ್ಯೆ ಉಂಟಾಗಬಹುದು.
*ಹೆಚ್ಚುವರಿ ಪ್ರೋಟೀನ್ ಸೇವನೆಯಿಂದ ಮೆದುಳಿಗೆ ಸಕ್ಕರೆ ಪ್ರಮಾಣದ ಪೂರೈಕೆ ಕಡಿಮೆಯಾಗಿ ತಲೆತಿರುಗುವಿಕೆ ಉಂಟಾಗುತ್ತದೆ.