ತೂಕ ಇಳಿಸಬೇಕೆಂಬುದು ಬಹುತೇಕರ ಕನಸು. ಬಳುಕುವ ಬಳ್ಳಿಯಂತ ದೇಹ ಪಡೆಯಬೇಕೆಂದು ಮಾಡದ ಕಸರತ್ತಾದರೂ ಯಾವುದಿರಬಹುದು. ಅದಕ್ಕಾಗಿ ಊಟ ಬಿಡಬೇಕು ಅಂದುಕೊಂಡರೂ ಸಾಧ್ಯವಾಗದೆ ಬೇಸರಿಸಿಕೊಳ್ಳುವವರಲ್ಲಿ ನೀವೂ ಒಬ್ಬರೇ, ಹಾಗಿದ್ದರೆ ಇಲ್ಲಿ ಕೇಳಿ…
ರಾತ್ರಿ ಮಲಗುವ ಮುನ್ನ ಹಾಗೂ ಮುಂಜಾನೆ ಎದ್ದಾಕ್ಷಣ ಕೆಲವು ಪಾನೀಯಗಳ ಸೇವನೆ ಮಾಡುವ ಮೂಲಕ ನೀವು ದೇಹ ತೂಕವನ್ನು ಇಳಿಸಬಹುದು. ಬೆಳಿಗ್ಗೆ ಎದ್ದಾಕ್ಷಣ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಜೇನು, ಲಿಂಬೆರಸ ಹಿಂಡಿ ಕುಡಿಯುವುದರಿಂದ ದೇಹದ ಕೊಬ್ಬು ಕರಗಿ ತೂಕ ಕಡಿಮೆಯಾಗುತ್ತದೆ.
ಖಾಲಿ ಹೊಟ್ಟೆಗೆ ಹುರಿದು ಹುಡಿ ಮಾಡಿಟ್ಟುಕೊಂಡ ಮೆಂತೆ ಸೇವಿಸುವುದರಿಂದಲೂ ಕೊಬ್ಬು ಕರಗುತ್ತದೆ ಹಾಗೂ ಮಧುಮೇಹದಂತಹ ರೋಗದಿಂದ ದೂರವಿರಲು ನೆರವಾಗುತ್ತದೆ.
ರಾತ್ರಿ ಮಲಗುವ ವೇಳೆ ಸಕ್ಕರೆ ಬಳಸಿದ ಯಾವುದೇ ಪಾನೀಯವನ್ನು ಕುಡಿಯದಿರಿ. ಗ್ರೀನ್ ಟೀ ಒಳ್ಳೆಯದು. ತಣ್ಣನೆಯ ಹಾಲು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ ಹಾಗೂ ಉತ್ತಮ ನಿದ್ದೆ ನಿಮ್ಮದಾಗುತ್ತದೆ.