ತೂಕ ಇಳಿಸೋದು ತುಂಬಾ ಕಷ್ಟಕರವಾದ ಕೆಲಸ. ಇದಕ್ಕಾಗಿ ವ್ಯಾಯಾಮದ ಜೊತೆಗೆ ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸಬೇಕು. ದಿನನಿತ್ಯದ ಕೆಲಸದಲ್ಲಿ ಸಮಯ ಮಾಡಿಕೊಂಡು ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಹರಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಡಯಟ್ ಚಾರ್ಟ್ ಅನುಸರಿಸುವುದು ಕೂಡ ಸುಲಭವಲ್ಲ. ಹಾಗಾಗಿ ದಿನನಿತ್ಯದ ಡಯಟ್‌ನಲ್ಲಿ ಕೆಲವು ಆಹಾರಗಳನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ತೂಕವನ್ನು ನಿಯಂತ್ರಿಸಬಹುದು. ಇವೆಲ್ಲವೂ ಕಪ್ಪು ಬಣ್ಣದಲ್ಲಿರುವ ಆಹಾರ ಪದಾರ್ಥಗಳೆಂಬುದು ವಿಶೇಷ. ಇವುಗಳ ಸೇವನೆಯಿಂದ ತೂಕವು ಬೇಗನೆ ಕಡಿಮೆಯಾಗುತ್ತದೆ.
ಕಪ್ಪು ಬೆಳ್ಳುಳ್ಳಿ: ಬೆಳ್ಳುಳ್ಳಿಯು ನಮ್ಮ ದೈನಂದಿನ ಆಹಾರದ ಭಾಗವಾಗಿದೆ. ಸಾಮಾನ್ಯವಾಗಿ ಎಲ್ಲರೂ ಇದನ್ನು ಅಡುಗೆಗೆ ಬಳಸುತ್ತಾರೆ. ಆದರೆ ನೀವು ತೂಕ ಇಳಿಸಲು ಕಪ್ಪು ಬೆಳ್ಳುಳ್ಳಿಯನ್ನು ತಿನ್ನಬೇಕು. ಬಿಳಿ ಬೆಳ್ಳುಳ್ಳಿಗೆ ಹೋಲಿಸಿದರೆ ಕಪ್ಪನೆಯ ಬೆಳ್ಳುಳ್ಳಿಯಲ್ಲಿ ಎರಡು ಪಟ್ಟು ಹೆಚ್ಚು ವಿಟಮಿನ್ ಸಿ ಮತ್ತು ಎಂಟಿ ಒಕ್ಸಿಡೆಂಟ್‌ಗಳು ಕಂಡುಬರುತ್ತವೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಸ್ಥೂಲಕಾಯತೆಯನ್ನು ಕಡಿಮೆ ಮಾಡುತ್ತದೆ.
ಕಪ್ಪು ಅಕ್ಕಿ: ನೀವು ಬಿಳಿ ಮತ್ತು ಕಂದು ಅಕ್ಕಿಯಿಂದ ಮಾಡಿದ ಅನ್ನವನ್ನು ಊಟ ಮಾಡಿರಬಹುದು. ಎಂದಾದರೂ ಕಪ್ಪು ಅಕ್ಕಿಯನ್ನು ಬಳಸಿದ್ದೀರಾ? ಇವು ಆಂಥೋಸಯಾನಿನ್ ಮತ್ತು ಆ್ಯಂಟಿಒಕ್ಸಿಡೆಂಟ್‌ಗಳನ್ನು ಒಳಗೊಂಡಿರುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕಪ್ಪು ಅಕ್ಕಿಯಲ್ಲಿರುವ ಫೈಬರ್‌ನ ಸಹಾಯದಿಂದ ತೂಕವನ್ನು ಕಡಿಮೆ ಮಾಡಬಹುದು. ಟೈಪ್-2 ಮಧುಮೇಹದ ಅಪಾಯವನ್ನು ಸಹ ಕಪ್ಪು ಅಕ್ಕಿ ಕಡಿಮೆ ಮಾಡುತ್ತದೆ.
ಬ್ಲಾಕ್ ಟೀ: ಹಾಲು ಮತ್ತು ಸಕ್ಕರೆಯಿಂದ ಮಾಡಿದ ಸಾಮಾನ್ಯ ಚಹಾವು ಬಹಳಷ್ಟು ಅನಾನುಕೂಲಗಳನ್ನು ಹೊಂದಿದೆ. ಇದರ ಬದಲಿಗೆ ಬ್ಲಾಕ್ ಟೀ ಸೇವಿಸಬೇಕು. ಇದರಲ್ಲಿರುವ ಪಾಲಿಫಿನಾಲ್‌ಗಳು ಜೀವಕೋಶದ ಹಾನಿಯನ್ನು ಕಡಿಮೆ ಮಾಡುತ್ತವೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಬೊಜ್ಜನ್ನು ತಡೆಯುತ್ತದೆ.
ಬ್ಲಾಕ್ ಬೆರ್ರಿ: ಬ್ಲಾಕ್ ಬೆರ್ರಿಯಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕಪ್ಪು ಬಣ್ಣದ ಈ ಹಣ್ಣು ತೂಕವನ್ನು ಕಡಿಮೆ ಮಾಡುತ್ತದೆ. ಬ್ಲಾಕ್ ಬೆರ್ರಿ ಸೇವನೆಯಿಂದ ಊತದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಜೊತೆಗೆ ಇದು ತ್ವಚೆಯನ್ನೂ ಸುಂದರವಾಗಿಸುತ್ತದೆ.