ತೂಕ ಇಳಿಸಲು ಬಯಸಿದರೆ ಸಮತೋಲಿತ ಆಹಾರ ಬಹಳ ಮುಖ್ಯ. ತೂಕ ಇಳಿಸಿಕೊಳ್ಳಲು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂಬುದರ ಬಗ್ಗೆ ವಿಶೇಷ ಗಮನ ನೀಡಲಾಗುತ್ತದೆ. ಯಾವ ಸಮಯದಲ್ಲಿ ಏನು ತಿನ್ನಬೇಕು ಎಂಬುದರ ಬಗ್ಗೆಯೂ ಕಾಳಜಿ ವಹಿಸಲಾಗುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ರಾತ್ರಿ ಅಪ್ಪಿತಪ್ಪಿ ಇದನ್ನು ಸೇವಿಸಬೇಡಿ.
ಎಲ್ಲ ವಯಸ್ಸಿನ ಜನರಿಗೆ ಪಿಜ್ಜಾ ಇಷ್ಟವಾಗುತ್ತದೆ. ಆದರೆ ಇದನ್ನು ರಾತ್ರಿ ತಿನ್ನಬಾರದು. ವಾಸ್ತವವಾಗಿ ಅದರಲ್ಲಿ ಹೆಚ್ಚಿನ ಪ್ರಮಾಣದ ಚೀಸ್ ಇರುತ್ತದೆ. ಸಾಸ್ ನಲ್ಲಿ ಸಕ್ಕರೆ ಕಂಡು ಬರುತ್ತದೆ. ಹಿಟ್ಟಿನಲ್ಲಿ ಸಂಸ್ಕರಿಸಿದ ಕಾರ್ಬ್ಗನ್ ಗಳಿರುತ್ತವೆ. ಇದು ತೂಕ ಹೆಚ್ಚಿಸುತ್ತದೆ.
ಬಾದಾಮಿ, ವಾಲ್ನಟ್ಸ್, ಗೋಡಂಬಿ ಮತ್ತು ಪಿಸ್ತಾ ಮುಂತಾದ ಒಣ ಹಣ್ಣುಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಅವು ಹೆಚ್ಚು ಕ್ಯಾಲೊರಿಗಳನ್ನು ಹೊಂದಿರುತ್ತವೆ. ನಿದ್ರೆಯಲ್ಲಿ ದೈಹಿಕ ಚಟುವಟಿಕೆ ಇರುವುದಿಲ್ಲ. ಹಾಗಾಗಿ ಕ್ಯಾಲೊರಿ ಶಕ್ತಿಗಾಗಿ ಬಳಸಲಾಗುವುದಿಲ್ಲ. ಇದು ಕೊಬ್ಬಿನಂತೆ ಹೆಪ್ಪುಗಟ್ಟುತ್ತದೆ.
ಮನೆಯಲ್ಲಿ ಜ್ಯೂಸರ್ ಇದ್ದಲ್ಲಿ ನೀವು ಜ್ಯೂಸ್ ತಯಾರಿಸಿ ಕುಡಿಯಬಹುದು. ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್ ರಾತ್ರಿ ಬೇಡ. ಸೋಡಾ ಜೊತೆ ಸಕ್ಕರೆ ಪ್ರಮಾಣ ಅದ್ರಲ್ಲಿ ಹೆಚ್ಚಿರುತ್ತದೆ. ಹಾಗೆ ಹಣ್ಣಿನಲ್ಲಿರುವ ಫೈಬರ್ ಇತರೆ ಪೋಷಕಾಂಶಗಳು ನಾಶವಾಗಿರುತ್ತವೆ.
ಚಾಕೊಲೇಟ್ ಅನೇಕ ಪ್ರಯೋಜನಗಳನ್ನು ಹೊಂದಿದ್ದರೂ, ಅವುಗಳಲ್ಲಿ ಸಕ್ಕರೆ ಮತ್ತು ಕೊಬ್ಬು ಇರುವುದರಿಂದ, ಮಲಗುವ ಮುನ್ನ ಅವುಗಳನ್ನು ತಿನ್ನಬಾರದು.
ಮಲಗುವ ಮುನ್ನ ಐಸ್ ಕ್ರೀಮ್ ತಿನ್ನಬೇಡಿ. ಮಾರುಕಟ್ಟೆಯಲ್ಲಿ ಕಂಡುಬರುವ ಐಸ್ ಕ್ರೀಂನಲ್ಲಿ ಸಾಕಷ್ಟು ಕೊಬ್ಬು ಮತ್ತು ಕೃತಕ ಸಕ್ಕರೆಯಿರುತ್ತದೆ. ಇದು ಕ್ಯಾಲೊರಿ ಹೆಚ್ಚಿಸುತ್ತದೆ.