ದೇಹವು ಆರೋಗ್ಯವಾಗಿದ್ದರೆ ಎಲ್ಲಾ ಕೆಲಸಗಳನ್ನು ಆರಾಮಾಗಿ ಮಾಡಬಹುದು. ಆರೋಗ್ಯವಾಗಿರಬೇಕು ಅಂದ್ರೆ ನಾವು ಸೇವಿಸುವ ಆಹಾರ ಚೆನ್ನಾಗಿರಬೇಕು. ಡಯಟ್ ಕಟ್ಟುನಿಟ್ಟಾಗಿರಬೇಕು. ಪೌಷ್ಟಿಕಾಂಶವುಳ್ಳ ತಿನಿಸುಗಳ ಸೇವನೆ ಬಹಳ ಮುಖ್ಯ.
ಸಾಮಾನ್ಯವಾಗಿ ರೊಟ್ಟಿ, ಚಪಾತಿಯನ್ನು ಎಲ್ಲರೂ ಸೇವಿಸ್ತಾರೆ. ರೊಟ್ಟಿಗಳಲ್ಲಿ ಪೋಷಕಾಂಶ ಸಮೃದ್ಧವಾಗಿರುತ್ತದೆ. ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿ ತಿಂದು ಬೇಜಾರಾಗಿದ್ದರೆ, ರಾಗಿ ರೊಟ್ಟಿ ಮತ್ತು ಜೋಳದ ರೊಟ್ಟಿಗಳನ್ನು ಟ್ರೈ ಮಾಡಿ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ರಾಗಿ ರೊಟ್ಟಿ: ರಾಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಾಗಿಯಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳಂತಹ ಅನೇಕ ಪೋಷಕಾಂಶಗಳು ಸಮೃದ್ಧವಾಗಿವೆ. ರಾಗಿ ರೊಟ್ಟಿ ವಯಸ್ಸಾದವರಿಗೆ ತುಂಬಾ ಪ್ರಯೋಜನಕಾರಿ. ಇದು ಕೀಲು ನೋವಿಗೆ ಪರಿಹಾರ ನೀಡುತ್ತದೆ. ಇದನ್ನು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಮತ್ತು ಕೀಲು ನೋವಿನ ಸಮಯದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ರಾಗಿ ರೊಟ್ಟಿಯಲ್ಲಿ ಉರಿಯೂತದ ಗುಣಲಕ್ಷಣಗಳು ಕಂಡುಬರುತ್ತವೆ, ಇದು ಸಂಧಿವಾತದಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.
ಜೋಳದ ರೊಟ್ಟಿ: ಜೋಳ ಕೂಡ ಅತ್ಯಂತ ಆರೋಗ್ಯಕರ ಆಹಾರಗಳಲ್ಲೊಂದು. ಸಕ್ಕರೆ ಕಾಯಿಲೆಯಂತಹ ಸಮಸ್ಯೆ ಇರುವವರಿಗಂತೂ ಜೋಳದ ರೊಟ್ಟಿ ಅತ್ಯುತ್ತಮ ಆಯ್ಕೆ. ಜೋಳದ ರೊಟ್ಟಿ ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಇದು ಹೊಟ್ಟೆಯ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.
ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಜೋಳದ ರೊಟ್ಟಿ ತಿನ್ನಿ. ಇದರಲ್ಲಿ ಪ್ರೋಟೀನ್ ಮತ್ತು ಪಿಷ್ಟ ಸಮೃದ್ಧವಾಗಿದೆ. ಮ್ಯಾಂಗನೀಸ್, ಪೊಟ್ಯಾಸಿಯಮ್, ಸತು, ಕಬ್ಬಿಣ, ರಂಜಕ, ತಾಮ್ರ, ಸೆಲೆನಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್-ಎ, ಬಿ, ಇ ಇವುಗಳು ಸಹ ಹೇರಳವಾಗಿವೆ. ಇದು ಕೀಲು ನೋವಿನಿಂದ ಪರಿಹಾರ ನೀಡುತ್ತದೆ. ಹಾಗಾಗಿ ಸದಾ ಗೋಧಿ ಹಿಟ್ಟಿನ ಚಪಾತಿಯನ್ನೇ ತಿನ್ನುವ ಬದಲು ಆಗಾಗ ರಾಗಿ ಮತ್ತು ಜೋಳದ ರೊಟ್ಟಿಯನ್ನೂ ಸೇವಿಸುವುದು ಉತ್ತಮ.