ಹಿಂದೂ ಶಾಸ್ತ್ರದಲ್ಲಿ ತುಳಸಿ ಗಿಡಕ್ಕೆ ತುಂಬಾನೇ ಮಹತ್ವವಿದೆ. ವಿಷ್ಣುವಿಗೆ ಅತ್ಯಂತ ಪ್ರಿಯವಾದ ತುಳಸಿಗೆ ಹಿಂದೂ ಮನೆಗಳಲ್ಲಿ ತುಂಬಾನೇ ಮಹತ್ವವನ್ನ ನೀಡಲಾಗುತ್ತೆ.
ಪ್ರತಿಯೊಂದು ಹಿಂದೂ ಮನೆಯ ಅಂಗಳದಲ್ಲೂ ನೀವು ತುಳಸಿ ಗಿಡವನ್ನ ಕಾಣುತ್ತೀರಾ. ಮನೆಯ ಮುಂದೆ ತುಳಸಿ ಗಿಡವನ್ನ ನೆಟ್ಟಲ್ಲಿ ಆ ಮನೆಯಲ್ಲಿ ಸಂತೋಷ ಹಾಗೂ ಸಮೃದ್ಧಿ ಸದಾ ಕಾಲ ನೆಲೆಸಿರುತ್ತೆ ಎಂಬ ನಂಬಿಕೆಯಿದೆ.
ತುಳಸಿಯಂತೆಯೇ ತುಳಸಿ ಮಣಿಯ ಸರಕ್ಕೂ ಹಿಂದೂ ಧರ್ಮದಲ್ಲಿ ತುಂಬಾನೇ ಮಹತ್ವವಿದೆ. ಆದರೆ ಈ ತುಳಸಿ ಹಾರವನ್ನ ಧರಿಸುವ ಮುನ್ನ ಕೆಲವೊಂದು ಮುಖ್ಯ ಅಂಶಗಳನ್ನ ಗಮನದಲ್ಲಿಡೋದು ಅವಶ್ಯಕ.
1. ತುಳಸಿ ಹಾರವನ್ನ ಮೊದಲು ಗಂಗಾ ಜಲದಲ್ಲಿ ಶುದ್ಧ ಮಾಡಿ ಅದು ಒಣಗಿದ ಬಳಿಕವೇ ಧರಿಸಬೇಕು.
2. ತುಳಸಿ ಹಾರವನ್ನ ಧರಿಸುವವರು ನಿತ್ಯ ಜಪ ಮಾಡಬೇಕು. ಈ ರೀತಿ ಮಾಡಿದ್ರೆ ಮಾತ್ರ ವಿಷ್ಣುವಿನ ಕೃಪೆ ಇರುತ್ತದೆ ಎಂಬ ನಂಬಿಕೆಯಿದೆ.
3. ತುಳಸಿ ಹಾರವನ್ನ ಧರಿಸುವವರು ಸಾತ್ವಿಕ ಆಹಾರವನ್ನೇ ಸೇವಿಸಬೇಕು. ಅಂದರೆ ಬೆಳ್ಳುಳ್ಳಿ, ಈರುಳ್ಳಿ ಹಾಗೂ ಮಾಂಸಾಹಾರ ಸೇವನೆಗೆ ನಿಷಿದ್ಧವಿದೆ.
4. ಒಮ್ಮೆ ಧರಿಸಿದ ಮೇಲೆ ಯಾವುದೇ ಕಾರಣಕ್ಕೂ ತುಳಸಿ ಹಾರವನ್ನ ದೇಹದಿಂದ ಬೇರ್ಪಡಿಸುವಂತಿಲ್ಲ.
ಅಸಲಿಯಾದ ತುಳಸಿ ಹಾರವನ್ನ ಗುರುತಿಸಬೇಕು ಅಂದರೆ ನೀವು ತುಳಸಿ ಮಣಿಯ ಸರವನ್ನ ಅರ್ಧಗಂಟೆಗಳ ಕಾಲ ನೀರಿನಲ್ಲಿಡಿ. ಅದು ಬಣ್ಣ ಬಿಡಲು ಆರಂಭಿಸಿತು ಅಂದರೆ ಅದು ನಕಲಿ ತುಳಸಿ ಹಾರ ಎಂದರ್ಥ.