ಈ ಬಾರಿ ನವೆಂಬರ್ 5ರಂದು ತುಳಸಿ ಮದುವೆ ಆಚರಿಸಲಾಗ್ತಿದೆ. ತುಳಸಿ ಮದುವೆ ಹಿಂದೂ ಧರ್ಮದಲ್ಲಿ ಮಹತ್ವ ಪಡೆದಿದೆ. ಹೆಣ್ಣು ಮಗುವಿಲ್ಲದವರು ಸಾಲಿಗ್ರಾಮಕ್ಕೆ ತುಳಸಿ ಮದುವೆ ಮಾಡಿದ್ರೆ ಕನ್ಯಾದಾನದ ಫಲ ಸಿಗುತ್ತೆ ಎಂದು ನಂಬಲಾಗಿದೆ.
ಇದೇ ದಿನದಿಂದ ಜನರು ಶುಭ ಕೆಲಸಗಳನ್ನು ಶುರು ಮಾಡ್ತಾರೆ. ತುಳಸಿ ಮದುವೆ ನಂತ್ರ ಮದುವೆ ಸಮಾರಂಭಗಳು ಶುರುವಾಗುತ್ತವೆ. ತುಳಸಿ ಮದುವೆ ಮನೆಯ ಸಂತೋಷಕ್ಕೆ ಕಾರಣವಾಗುತ್ತೆ ಎಂದು ನಂಬಲಾಗಿದೆ.
ತುಳಸಿ ಮದುವೆ ಮಾಡುವಾಗ ಮನೆಯೊಳಗೆ ತುಳಸಿ ಗಿಡವನ್ನು ಇಡಬಾರದು. ಮನೆ ಹೊರಗೆ ಅಥವಾ ತೆರೆದ ಸ್ಥಳದಲ್ಲಿ ತುಳಸಿಯನ್ನು ಇಡಬೇಕು.
ತುಳಸಿ ವಿವಾಹಕ್ಕಾಗಿ ಕಬ್ಬಿನಿಂದ ಮಂಟಪ ತಯಾರಿಸಬೇಕು.
ತುಳಸಿ ಮದುವೆ ಶುರು ಮಾಡುವ ಮೊದಲು ಕೆಂಪು ಚುನರಿಯನ್ನು ತುಳಸಿ ಗಿಡಕ್ಕೆ ಹಾಕಬೇಕು.
ತುಳಸಿ ಜೊತೆ ವಿಷ್ಣುವಿನ ಇನ್ನೊಂದು ಅವತಾರ ಸಾಲಿಗ್ರಾಮವನ್ನಿಟ್ಟು ಅದಕ್ಕೆ ಎಳ್ಳನ್ನು ಅರ್ಪಿಸಿ.
ಹಾಲಿಗೆ ಅರಿಶಿನ ಹಾಕಿ ಅದನ್ನು ತುಳಸಿ ಹಾಗೂ ಸಾಲಿಗ್ರಾಮಕ್ಕೆ ಅರ್ಪಿಸಿ.
ತುಳಸಿ ಮದುವೆ ಸಂದರ್ಭದಲ್ಲಿ ಮಂಗಳಾಷ್ಟಕವನ್ನು ಪಠಿಸಬೇಕು.
ತುಳಸಿ ಮದುವೆ ಮುಗಿದ ಮೇಲೆ ತುಳಸಿ ಗಿಡಕ್ಕೆ ಪ್ರದಕ್ಷಣೆ ಹಾಕಬೇಕು.