ತುಳಸಿ ಔಷಧೀಯ ಗುಣಗಳನ್ನು ಹೊಂದಿದೆ. ಹಾಗಾಗಿ ಇದನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅದೇ ರೀತಿ ತುಳಸಿ ಬೀಜದಲ್ಲಿಯೂ ಕೂಡ ಔಷಧೀಯ ಗುಣಗಳಿವೆ. ಇದರಲ್ಲಿ ಪ್ರೋಟೀನ್, ಫೈಬರ್, ಕಬ್ಬಿಣ, ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿವೆ. ಇದನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ತುಳಸಿ ಬೀಜಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸರಿಯಾಗಿರುತ್ತದೆ. ಇದು ಮಲಬದ್ಧತೆ, ಆ್ಯಸಿಡಿಟಿ, ಅಜೀರ್ಣ ಸಮಸ್ಯೆಯನ್ನು ಪರಿಹರಿಸುತ್ತದೆ. ಹಾಗಾಗಿ ತುಳಸಿ ಬೀಜಗಳನ್ನು ನೀರಿನಲ್ಲಿ ನೆನೆಸಿ ಕುಡಿಯಿರಿ.
ಬಸ್ ನಲ್ಲಿ ಜನಿಸಿದ ಹೆಣ್ಣುಮಕ್ಕಳಿಗೆ ಜೀವನಪರ್ಯಂತ ಉಚಿತ ಪ್ರಯಾಣದ ಗಿಫ್ಟ್
ನಿಮಗೆ ಮೈಕೈ ನೋವಿದ್ದರೆ ತುಳಸಿ ಬೀಜಗಳನ್ನು ಸೇವಿಸಿ. ತುಳಸಿ ಬೀಜದಲ್ಲಿ ನೋವು ನಿವಾರಕ ಗುಣವಿದೆ. ಇದು ದೇಹದ ನೋವನ್ನು ಕಡಿಮೆ ಮಾಡುತ್ತದೆ.
ತುಳಸಿ ಬೀಜ ತೂಕ ನಷ್ಟಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಕ್ಯಾಲೋರಿ ಕಡಿಮೆ ಇದೆ, ಫೈಬರ್ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಬೇಗನೆ ಹಸಿವಾಗುವುದಿಲ್ಲ. ಇದರಿಂದ ಅತಿಯಾಗಿ ಆಹಾರ ಸೇವಿಸುವುದನ್ನು ತಡೆಯಬಹುದು. ಇದರಿಂದ ತೂಕ ಇಳಿಕೆಯಾಗುತ್ತದೆ. ಹಾಗಾಗಿ ತುಳಿಸಿ ಬೀಜದಿಂದ ಟೀ ತಯಾರಿಸಿ ಕುಡಿಯಿರಿ.
ತುಳಸಿ ಬೀಜವನ್ನು ಸೇವಿಸುವುದರಿಂದ ಒತ್ತಡ ನಿವಾರಣೆಯಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.