ತುಳಸಿಯನ್ನು ಲಕ್ಷ್ಮಿ ರೂಪವೆಂದು ಪರಿಗಣಿಸಲಾಗಿದೆ. ಯಾರ ಮನೆಯಲ್ಲಿ ತುಳಸಿ ಇರುತ್ತಾಳೋ ಆ ಮನೆಯಲ್ಲಿ ಲಕ್ಷ್ಮಿ ವಾಸಿಸುತ್ತಾಳೆ. ಹಾಗಾಗಿ ಮನೆಯಲ್ಲಿ ತುಳಸಿ ಸಸಿ ಇರುವುದು ಒಳ್ಳೆಯದು.
ಉತ್ತರ, ಪೂರ್ವ ಅಥವಾ ಮನೆಯ ಮುಂದೆ ತುಳಸಿ ಸಸಿ ಇರಲಿ. ಪ್ರತಿದಿನ ತುಳಸಿ ಪೂಜೆ ಮಾಡುವುದರಿಂದ ಸಾಕಷ್ಟು ಲಾಭವಿದೆ.
ತುಳಸಿ ಪೂಜೆ ಮಾಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ. ಹಾಗೆ ಪೂಜೆ ಮಾಡುವ ವ್ಯಕ್ತಿಗೆ ವೃತ, ಯಜ್ಞ, ಹವನ ಮಾಡಿದ ಫಲ ಸಿಗುತ್ತದೆ.
ಪ್ರತಿದಿನ ತುಳಸಿ ದರ್ಶನ ಮಾಡುವುದರಿಂದ ವ್ಯಕ್ತಿಯ ಪಾಪ ಕಡಿಮೆಯಾಗುತ್ತದೆ.
ಪ್ರತಿದಿನ ತುಳಸಿ ಪೂಜೆ ಮಾಡುವುದರಿಂದ ಮುಕ್ತಿ ಪ್ರಾಪ್ತಿಯಾಗುತ್ತದೆ.
ಮನೆಯಿಂದ ಹೊರಗೆ ಹೋಗುವ ಮುನ್ನ ತುಳಸಿ ದರ್ಶನ ಮಾಡಿ ಹೋಗುವುದು ಒಳ್ಳೆಯದು.
ತುಳಸಿ ಎಲೆಯಲ್ಲಿ ಔಷಧಿ ಗುಣವಿದೆ. ಈ ಎಲೆಯನ್ನು ನೀರಿಗೆ ಹಾಕುವುದರಿಂದ ಕೀಟಾಣುಗಳು ಸಾಯುತ್ತವೆ.
ಪ್ರತಿ ದಿನ ಸ್ನಾನ ಮಾಡಿ ತುಳಸಿ ಬಳಿ ದೀಪ ಹಚ್ಚುವುದರಿಂದ ದೇವಿ ದೋಷ ಕಡಿಮೆಯಾಗುತ್ತದೆ.
ತುಳಸಿ ಎಲೆ ಕೀಳುವ ಮುನ್ನ ತುಳಸಿ ಮಾತೆಯನ್ನು ಪ್ರಾರ್ಥಿಸಿ.