alex Certify ತುಳಸಿ ಪೂಜೆಯಲ್ಲಿ ಈ ತಪ್ಪು ಮಾಡಿದ್ರೆ ದುರಾದೃಷ್ಟ ನಿಮ್ಮನ್ನು ಬೆನ್ನಟ್ಟುತ್ತದೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತುಳಸಿ ಪೂಜೆಯಲ್ಲಿ ಈ ತಪ್ಪು ಮಾಡಿದ್ರೆ ದುರಾದೃಷ್ಟ ನಿಮ್ಮನ್ನು ಬೆನ್ನಟ್ಟುತ್ತದೆ…!

ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ತುಳಸಿ ಗಿಡದಲ್ಲಿ ಅನೇಕ ಔಷಧೀಯ ಗುಣಗಳೂ ಇವೆ. ಅದಕ್ಕಾಗಿಯೇ ಬಹುತೇಕ ಮನೆಗಳಲ್ಲಿ ತುಳಸಿ ಗಿಡವನ್ನು ನೆಡುವುದು ವಾಡಿಕೆ. ತುಳಸಿ ಗಿಡ ಇರುವ ಕಡೆ ಸಕಾರಾತ್ಮಕತೆ ತುಂಬಿರುತ್ತದೆ. ಆ ಮನೆಯಲ್ಲಿ ತಾಯಿ ಲಕ್ಷ್ಮಿ ವಾಸವಾಗಿರುತ್ತಾಳೆ. ಅದಕ್ಕಾಗಿಯೇ ಜನರು ತುಳಸಿ ಗಿಡವನ್ನು ಪೂಜಿಸುತ್ತಾರೆ. ತುಳಸಿಯನ್ನು ಪೂಜಿಸಿದರೆ ಭಗವಾನ್ ವಿಷ್ಣುವೂ ಪ್ರಸನ್ನನಾಗುತ್ತಾನೆ.ಆದರೆ ತುಳಸಿಯನ್ನು ಪೂಜಿಸುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಇಲ್ಲವಾದರೆ ಲಾಭದ ಬದಲು ನಷ್ಟವನ್ನೇ ಎದುರಿಸಬೇಕಾಗುತ್ತದೆ.

ತುಳಸಿ ಪೂಜೆಯ ನಿಯಮಗಳು…

– ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿ ನಂತರ ತುಳಸಿ ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ವಿಷ್ಣು ಮತ್ತು ಲಕ್ಷ್ಮಿ ಇಬ್ಬರೂ ಆಶೀರ್ವದಿಸುತ್ತಾರೆ. ಭಾನುವಾರ ಮತ್ತು ಏಕಾದಶಿಯಂದು ತುಳಸಿಗೆ ಎಂದಿಗೂ ನೀರನ್ನು ಅರ್ಪಿಸಬೇಡಿ. ಈ ದಿನಗಳಲ್ಲಿ ತುಳಸಿ ಮಾತೆಯು ವಿಷ್ಣುವಿಗಾಗಿ ಉಪವಾಸವನ್ನು ಆಚರಿಸುತ್ತಾಳೆ. ತುಳಸಿ ಗಿಡಕ್ಕೆ ನೀರು ಕೊಡುವುದರಿಂದ ಉಪವಾಸ ಭಂಗವಾಗುತ್ತದೆ, ತುಳಸಿ ಮಾತೆ ಕೋಪಗೊಳ್ಳುತ್ತಾಳೆ. ಅಲ್ಲದೆ, ಭಾನುವಾರ ಮತ್ತು ಏಕಾದಶಿಯಂದು ತುಳಸಿ ಎಲೆಗಳನ್ನು ಕೀಳಬೇಡಿ ಅಥವಾ ತುಳಸಿ ಗಿಡವನ್ನು ಮುಟ್ಟಬೇಡಿ.

– ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ಸಮಯದಲ್ಲಿ ತುಳಸಿ ಗಿಡವನ್ನು ಮುಟ್ಟಬೇಡಿ. ಈ ಸಮಯದಲ್ಲಿ ನೀರು ಹಾಕಬೇಡಿ,  ಪೂಜೆ ಮಾಡಬೇಡಿ. ಆಹಾರ ಮತ್ತು ನೀರಿನಲ್ಲಿ ಹಾಕಿಡಲು ಗ್ರಹಣ ಕಾಲಕ್ಕೂ ಮೊದಲೇ ತುಳಸಿ ಎಲೆಗಳನ್ನು ಕಿತ್ತು ಇರಿಸಿಕೊಳ್ಳಿ.

– ಸ್ನಾನ ಮಾಡದೆ ತುಳಸಿಗೆ ನೀರು ಹಾಕಬಾರದು, ತುಳಸಿ ಗಿಡವನ್ನು ಮುಟ್ಟಬಾರದು. ಕೊಳಕು ಕೈಗಳಿಂದ ತುಳಸಿ ಗಿಡವನ್ನು ಮುಟ್ಟುವುದು, ಬೂಟುಗಳು ಮತ್ತು ಚಪ್ಪಲಿಗಳನ್ನು ಧರಿಸಿ ಸ್ಪರ್ಷಿಸುವುದು ಮಹಾಪಾಪ.

– ತುಳಸಿ ಗಿಡದ ಎಲೆಗಳನ್ನು ಅನಗತ್ಯವಾಗಿ ಕೀಳಬಾರದು. ಹೀಗೆ ಮಾಡುವುದರಿಂದ ದುರಾದೃಷ್ಟ ಬೆನ್ನಟ್ಟುತ್ತದೆ. ಅಗತ್ಯವಿದ್ದಾಗ ಬೇಕಾದಷ್ಟೇ ಎಲೆಗಳನ್ನು ಕೀಳಬೇಕು.

– ತುಳಸಿ ಗಿಡಕ್ಕೆ ನೀರು ಅರ್ಪಿಸುವಾಗ ‘ಮಹಾಪ್ರಸಾದ ಜನನಿ, ಸರ್ವ ಸೌಭಾಗ್ಯವರ್ಧಿನಿ’. ಆಧಿ ವ್ಯಾಧಿ ಹರ ನಿತ್ಯಂ, ತುಲಸೀ ತ್ವಂ ನಮೋಸ್ತುತೇʼ ಎಂಬ ಮಂತ್ರವನ್ನು ಉಚ್ಚರಿಸಬೇಕು. ಇದು ಪೂಜೆಯ ಸಂಪೂರ್ಣ ಫಲವನ್ನು ನೀಡುತ್ತದೆ. ತುಳಸಿಯನ್ನು ಪೂಜಿಸುವಾಗ ಮಹಿಳೆಯರು ಕೂದಲನ್ನು ಬಿಚ್ಚಿಕೊಂಡಿರಬಾರದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...