ಹಿಂದೂಧರ್ಮದಲ್ಲಿ ತುಳಸಿಗೆ ಮಹತ್ವದ ಸ್ಥಾನವಿದೆ. ತುಳಸಿ ಗಿಡವನ್ನು ದೇವಿ ಲಕ್ಷ್ಮಿಯ ಸ್ವರೂಪವೆಂದು ನಂಬಲಾಗಿದೆ. ಹಾಗಾಗಿ ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಪೂಜಿಸಲಾಗುತ್ತದೆ. ಆದಕಾರಣ ತುಳಸಿ ಗಿಡದ ಬಳಿ ಅಪ್ಪಿತಪ್ಪಿಯೂ ಈ 5 ವಸ್ತುಗಳನ್ನು ಇಡಬೇಡಿ.
ತುಳಸಿ ಗಿಡದ ಬಳಿ ಬಟ್ಟೆಗಳನ್ನು ಒಣಗಲು ಹಾಕಬೇಡಿ. ಇದರಿಂದ ಸಕರಾತ್ಮಕ ಶಕ್ತಿ ನಾಶವಾಗುತ್ತದೆ. ಇದರಿಂದ ಮನೆಗೆ ಬಡತನ ಆವರಿಸುತ್ತದೆ.
ತುಳಸಿ ಗಿಡದ ಬಳಿ ಸ್ವಚ್ಚವಾಗಿರಬೇಕು. ಇಲ್ಲವಾದರೆ ತಾಯಿ ತುಳಸಿ ಮನೆಬಿಟ್ಟು ಹೋಗುತ್ತಾಳೆ. ಇದರಿಂದ ಮನೆಯಲ್ಲಿ ಧನಹಾನಿ ಸಂಭವಿಸಬಹುದು.
ತುಳಸಿ ಗಿಡದ ಬಳಿ ಗಣೇಶನನ್ನು ಸ್ಥಾಪಿಸಬೇಡಿ. ಇದರಿಂದ ನಿಮ್ಮ ಮನೆಯಲ್ಲಿ ಗಲಾಟೆ, ಜಗಳ ನಡೆಯಬಹುದು.
ಶೂ. ಚಪ್ಪಲಿಗಳನ್ನು ತುಳಸಿ ಗಿಡದ ಬಳಿ ಇಡಬೇಡಿ. ಇದರಿಂದ ಲಕ್ಷ್ಮಿದೇವಿ ಸಿಟ್ಟಾಗಿ ಮನೆಯನ್ನು ತೊರೆಯಬಹುದು.
ತುಳಸಿ ಗಿಡದ ಬಳಿ ಶಿವಲಿಂಗವನ್ನು ಇಡಬೇಡಿ.