ವ್ಯಕ್ತಿಯೊಬ್ಬ ತುರ್ತು ಸಹಾಯವಾಣಿಗೆ ಕರೆ ಮಾಡಿ ರೈಲ್ವೆ ನಿಲ್ದಾಣವೊಂದರಲ್ಲಿ ಬಾಂಬ್ ಇದೆ ಎಂದು ತಿಳಿಸಿದ್ದಲ್ಲದೆ ಆ ರೈಲ್ವೆ ನಿಲ್ದಾಣದ ಹೆಸರು ಹೇಳಬೇಕೆಂದರೆ ಏಳು ಕೋಟಿ ರೂಪಾಯಿ ನೀಡಿ ಎಂಬ ಬೇಡಿಕೆ ಇಟ್ಟಿರುವ ವಿಲಕ್ಷಣ ಘಟನೆ ನಡೆದಿದೆ.
ಮಂಗಳವಾರದಂದು ಥಾಣೆ ಜಿಲ್ಲೆಯಲ್ಲಿರುವ ನವಿ ಮುಂಬೈ ತುರ್ತು ಪೊಲೀಸ್ ಸಹಾಯವಾಣಿ 112 ಗೆ ಅನಾಮಧೇಯನಿಂದ ಕರೆಯೊಂದು ಬಂದಿದೆ. ಕರೆ ಮಾಡಿದ ವ್ಯಕ್ತಿ ರೈಲು ನಿಲ್ದಾಣವೊಂದರಲ್ಲಿ ಬಾಂಬ್ ಇದೆ ಎಂದು ತಿಳಿಸಿದ್ದು, ಮಾಹಿತಿ ನೀಡಬೇಕೆಂದರೆ ಏಳು ಕೋಟಿ ರೂಪಾಯಿ ನೀಡಿ ಎಂದಿದ್ದಾನೆ.
ಬಳಿಕ ಆತ ಕರೆ ಕಟ್ ಮಾಡಿದ್ದು, ಆದರೂ ಇದನ್ನು ನಿರ್ಲಕ್ಷಿಸದ ಪೊಲೀಸರು ತಮಗೆ ಲಭ್ಯವಿದ್ದ ಮಾಹಿತಿಯಂತೆ ರೈಲು ನಿಲ್ದಾಣ ತಪಾಸಣೆ ನಡೆಸಿದ್ದು ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂಬುದು ಗೊತ್ತಾಗಿದೆ.
ಹೀಗಿರಲಿ ನಿಮ್ಮ ʼಪಾದರಕ್ಷೆʼಯ ಆಯ್ಕೆ
ಇದೀಗ ಅನಾಮಧೇಯನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹುಸಿ ಕರೆ ಮಾಡಿ ಏಳು ಕೋಟಿ ರೂಪಾಯಿಗಳ ಬೇಡಿಕೆ ಇಟ್ಟ ವ್ಯಕ್ತಿಯ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.