ತುಪ್ಪ ಸೇವನೆಯಿಂದ ದೇಹದಲ್ಲಿ ಕೊಬ್ಬು ಬೆಳೆಯುತ್ತದೆ ಎಂದು ತಪ್ಪು ತಿಳಿದುಕೊಂಡವರಲ್ಲಿ ನೀವು ಒಬ್ಬರೆ. ಹಾಗಿದ್ದರೆ ಕಡ್ಡಾಯವಾಗಿ ನೀವು ಈ ಲೇಖನವನ್ನು ಓದಬೇಕು. ತುಪ್ಪದಲ್ಲಿ ಎಷ್ಟೆಲ್ಲಾ ಉತ್ತಮ ಗುಣಗಳಿವೆ ಎಂಬುದನ್ನು ತಿಳಿಯಲೇ ಬೇಕು.
ಹಾಲಿನ ಉತ್ಪನ್ನವಾಗಿರುವ ತುಪ್ಪ ಪೋಷಕಾಂಶಗಳ ಆಗರ. ಇದು ಲ್ಯಾಕ್ಟೋಸ್ ಫ್ರೀ ಆಗಿರುವುದರಿಂದ ಯಾವುದೇ ಅಡ್ಡಪರಿಣಾಮಗಳೂ ಇಲ್ಲ. ನಿತ್ಯ ತುಪ್ಪ ಸೇವಿಸುವವರ ಮೆದುಳು ಇತರರಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿರುತ್ತದೆ ಎನ್ನುತ್ತಾರೆ ತಜ್ಞರು.
ಮೂಲವ್ಯಾದಿ ಸಮಸ್ಯೆ ದೂರವಾಗಲು ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲಿಗೆ ಒಂದು ಚಮಚ ತುಪ್ಪ ಹಾಕಿ ಕುಡಿಯಿರಿ. ಇದರಿಂದ ಮಲಬದ್ಧತೆಯೂ ದೂರವಾಗುತ್ತದೆ. ಕರುಳು ಸ್ವಚ್ಛಗೊಳ್ಳುತ್ತದೆ. ಮೂಗು ಕಟ್ಟಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಎರಡು ಹನಿ ತುಪ್ಪವನ್ನು ಮೂಗಿನ ಹೊಳ್ಳೆಗಳಿಗೆ ಬಿಟ್ಟುಕೊಳ್ಳಿ. ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.