ತುಪ್ಪ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಆದರೆ ಇತ್ತೀಚೆಗೆ ಕೊಬ್ಬು ಎಂದು ಕೆಲವರು ಇದನ್ನು ಸೇವಿಸುವುದಿಲ್ಲ.
ಶುದ್ಧವಾದ ದೇಸಿ ತುಪ್ಪ ದೇಹಕ್ಕೆ ಯಾವುದೇ ಹಾನಿಕಾರಕವಲ್ಲ ಎಂದು ಸಂಶೋಧನೆಗಳು ಕೂಡ ಹೇಳುತ್ತಿವೆ. ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಹಾಗೂ ನಮ್ಮ ಹಾರ್ಮೋನುಗಳನ್ನು ಸಮತೋಲನ ವ್ಯವಸ್ಥೆಯಲ್ಲಿಡಲು ತುಪ್ಪ ಮಹತ್ವದ ಪಾತ್ರ ವಹಿಸುತ್ತದೆ.
*ಚಳಿಗಾಲದಲ್ಲಿ ತುಪ್ಪ ಸೇವಿಸುವುದರಿಂದ ದೇಹವನ್ನು ಬೆಚ್ಚಗಿರಿಸಿಕೊಳ್ಳಬಹುದು. ಚಳಿಗಾಲದಲ್ಲಿ ತುಪ್ಪದಿಂದ ಮಾಡಿದ ಖಾದ್ಯಗಳನ್ನು ಹಿತಮಿತವಾಗಿ ಸೇವಿಸಿದರೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
*ಶೀತ, ಕಟ್ಟಿದ ಮೂಗಿನ ಸಮಸ್ಯೆ ಹೆಚ್ಚಾಗಿ ಮಳೆಗಾಲ, ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಶುದ್ಧವಾದ ದೇಸಿ ತುಪ್ಪವನ್ನು ಬಿಸಿ ಮಾಡಿ. ಅದು ಉಗುರು ಬೆಚ್ಚಗಿರುವಾಗ ಒಂದೊಂದು ಹನಿಯನ್ನು ಮೂಗಿಗೆ ಹಾಕಿದರೆ ಕಟ್ಟಿದ ಮೂಗಿನ ಸಮಸ್ಯೆ ನಿವಾರಣೆಯಾಗುತ್ತದೆ. ಜತೆಗೆ ಗಂಟಲಿನ ಕಿರಿಕಿರಿ ಕೂಡ ಕಡಿಮೆಯಾಗುತ್ತದೆ.
* ಇನ್ನು ಬಾಣಂತಿಯರಿಗೆ ತುಪ್ಪದಿಂದ ಮಾಡಿದ ಲಡ್ಡುಗಳನ್ನು ನೀಡಿದರೆ ಅವರಲ್ಲಿ ಶಕ್ತಿ ಹೆಚ್ಚುತ್ತದೆ.
* ದೇಹದ ತೂಕವನ್ನು ಇಳಿಸಿಕೊಳ್ಳಬಯಸುವವರಿಗೆ ತುಪ್ಪ ಕೂಡ ಒಂದು ಅದ್ಭುತವಾದ ಟಿಪ್ಸ್. ತುಪ್ಪದಲ್ಲಿ ದೇಹಕ್ಕೆ ಬೇಕಾದ ಒಳ್ಳೆಯ ಕೊಬ್ಬು ಇದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿರುವ ಟಾಕ್ಸಿನ್ ಅನ್ನು ಹೊರ ಹಾಕುತ್ತದೆ.
*ನಿಯಮಿತವಾಗಿ ತುಪ್ಪ ಸೇವಿಸುವುದರಿಂದ ಜೀರ್ಣಕ್ರೀಯೆ ಚೆನ್ನಾಗಿ ಆಗುತ್ತದೆ. ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಒಂದು ಗ್ಲಾಸ್ ಬಿಸಿ ಹಾಲಿಗೆ ಒಂದು ಟೀ ಸ್ಪೂನ್ ತುಪ್ಪ ಹಾಕಿ ಕುಡಿದರೆ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
*ತುಪ್ಪ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳು ಸ್ವಲ್ಪ ಜಾಸ್ತಿ ಸೇವಿಸಿದರೆ ಒಳ್ಳೆಯದು. ಹಾಗೇ ದೊಡ್ಡವರು ಹಿತಮಿತವಾಗಿ ಸೇವಿಸಬೇಕು. ಇದು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.