ತುಪ್ಪ ಹಸುವಿನ ಹಾಲಿನಿಂದ ತಯಾರಾದ ನೈಸರ್ಗಿಕ ಡೈರಿ ಉತ್ಪನ್ನವಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕಗಳ ಬಳಕೆಯಿಲ್ಲ. ರಕ್ತದೊತ್ತಡ ಸಮಸ್ಯೆ ಇಲ್ಲದ ಎಲ್ಲರೂ ತುಪ್ಪ ಸೇವಿಸಬಹುದು. ಅದರೊಂದಿಗೆ ದೇಹದ ಮೇಲ್ಭಾಗದಲ್ಲಿ ತುಪ್ಪ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ತಿಳಿಯೋಣ.
ತುಪ್ಪವನ್ನು ತಲೆ ನೆತ್ತಿಯ ಮೇಲೆ ಹಾಕಿ ನಯವಾಗಿ ಮಸಾಜ್ ಮಾಡುವುದರಿಂದ ಕೂದಲಿನ ಬೆಳವಣಿಗೆ ಉತ್ತೇಜನಗೊಳ್ಳುತ್ತದೆ. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಕೂದಲು ಉದ್ದವಾಗುತ್ತದೆ. ಸಾಧ್ಯವಾದಷ್ಟು ಮನೆಯ ಗಟ್ಟಿ ಹಾಲಿನಿಂದ ತಯಾರಾದ ತುಪ್ಪವನ್ನೇ ಬಳಸಿ. ಇದರಿಂದ ನೆತ್ತಿಯ ಭಾಗದಲ್ಲಿ ರಕ್ತ ಸಂಚಾರ ಅಧಿಕಗೊಂಡು ಉತ್ತಮ ಪೌಷ್ಠಿಕಾಂಶಗಳು ಕೂದಲಿನ ಬೇರಿಗೆ ತಲುಪುತ್ತದೆ.
ನೆತ್ತಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಫಂಗಸ್, ಹೊಟ್ಟಿನ ಸಮಸ್ಯೆಗೆ ಕಾರಣವಾಗುತ್ತದೆ. ಇದನ್ನು ಬಗೆಹರಿಸಲು ತುಪ್ಪದ ಮಸಾಜ್ ಮಾಡಬಹುದು. ಇದರಿಂದ ತಲೆಹೊಟ್ಟು, ತಲೆ ಕೆರೆತ, ಒಣ ತಲೆ ಇತ್ಯಾದಿ ಸಮಸ್ಯೆಗಳು ದೂರವಾಗುತ್ತವೆ.
ಅರ್ಧ ಚಮಚ ತುಪ್ಪಕ್ಕೆ 1 ಚಮಚ ನಿಂಬೆ ಹಣ್ಣಿನ ರಸ ಮತ್ತು ಬಾದಾಮಿ ಎಣ್ಣೆ ಬೆರೆಸಿ. ಕೂದಲು ಸೇರಿದಂತೆ ನೆತ್ತಿಯ ಭಾಗಕ್ಕೆ ವಾರದಲ್ಲಿ ಎರಡು ಬಾರಿ ಮಸಾಜ್ ಮಾಡಿ. ಇದರಿಂದ ನೆತ್ತಿ ಒಣಗುವ ಸಮಸ್ಯೆ ದೂರವಾಗುತ್ತದೆ.