ವಯಸ್ಸಾಗುತ್ತಿದ್ದಂತೆ ಮುಖದ ಮೇಲೆ ಸುಕ್ಕುಗಳು ಮೂಡಲು ಶುರುವಾಗುತ್ತದೆ. ಹಣೆಯ ಮೇಲೆ, ಕಣ್ಣಿನ ಹತ್ತಿರ, ತುಟಿ ಸುತ್ತಲೂ, ಕುತ್ತಿಗೆಯಲ್ಲಿ ಚರ್ಮ ಸುಕ್ಕುಗಟ್ಟುತ್ತದೆ. ಇದರಿಂದ ನಿಮ್ಮ ಅಂದ ಕೆಡುತ್ತದೆ. ಹಾಗಾಗಿ ಈ ತುಟಿಯ ಸುತ್ತಲೂ ಇರುವ ಸುಕ್ಕುಗಳನ್ನು ನಿವಾರಿಸಿಕೊಳ್ಳಲು ಈ ವ್ಯಾಯಾಮಗಳನ್ನು ಅಭ್ಯಾಸ ಮಾಡಿ.
*ಬಲೂನ್ ವ್ಯಾಯಾಮ : ಇದು ತುಟಿಗಳ ಚರ್ಮವನ್ನು ಬಿಗಿಗೊಳಿಸುತ್ತದೆ. ಮೊದಲು ಆಳವಾಗಿ ಉಸಿರಾಡಿ ಬಾಯಿಯೊಳಗೆ ಗಾಳಿಯನ್ನು ತುಂಬಿಸಿಕೊಳ್ಳಿ. ಆಮೇಲೆ ಗಾಳಿಯನ್ನು ಹೊರಗೆ ಬಿಡಿ. ಹೀಗೆ ಇದನ್ನು ಕನಿಷ್ಠ 5 ಬಾರಿಯಂತೆ ದಿನಕ್ಕೆ 2-3 ಬಾರಿ ಮಾಡಿ.
* ಫಿಂಗರ್ ಪ್ರೆಸ್ ಫೇಸ್ ವ್ಯಾಯಾಮ : ಬೆರಳುಗಳ ಸಹಾಯದಿಂದ ಮಸಾಜ್ ಮಾಡುವುದರ ಮೂಲಕ ತುಟಿಯ ಸುತ್ತಲಿನ ಗೆರೆಗಳನ್ನು ನಿವಾರಿಸಬಹುದು. ನಿಮ್ಮ ಎರಡು ಕೈಗಳ ತೋರು ಬೆರಳನ್ನು ತುಟಿಯ ಎರಡು ಮೂಲೆಗಳಲ್ಲಿ ಇರಿಸಿ ಬಾಯಿ ಮುಚ್ಚಿ ಕಿರುನಗೆಯನ್ನಾಡಿ. ಬಳಿಕ ಎರಡೂ ಬೆರಳುಗಳನ್ನು ಕೆನ್ನೆಯ ಮೂಳೆಯ ಕಡೆಗೆ ಒತ್ತಿರಿ. ಇದನ್ನು 5 ಬಾರಿ ಮಾಡಿ.
*ನಾಲಿಗೆ ಮಸಾಜ್ ವ್ಯಾಯಾಮ : ಇದು ಮುಖದ ಮೇಲಿನ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಇದು ತುಟಿಗಳ ಸುತ್ತಲೂ ಸುಕ್ಕು ಕಡಿಮೆ ಮಾಡುತ್ತದೆ. ಮೊದಲು ಬಾಯಿ ಮುಚ್ಚಿ. ಎಡ ಕೆನ್ನೆಯ ಮೇಲೆ ನಾಲಿಗೆಯನ್ನು ಬಾಯಿಯೊಳಗೆ ತಿರುಗಿಸಿ. 10 ಸೆಕೆಂಡುಗಳ ಕಾಲ ಮಾಡಿ. ಬಳಿಕ ಮತ್ತೊಂದು ಕೆನ್ನೆಯ ಮೇಲೆ ಮಾಡಿ. ಇದನ್ನು 10 ಸಲ ಹೀಗೆ ಮಾಡಿ.