ಮಹಿಳೆಯರ ಪಾಲಿಗೆ ಮೇಕಪ್ ಎನ್ನುವುದು ತುಂಬ ಮುಖ್ಯವಾಗಿರುತ್ತದೆ. ಹಾಗೆಯೇ ತುಟಿಗೆ ಹಚ್ಚುವ ಲಿಪ್ ಸ್ಟಿಕ್ ಕೂಡ ಮುಖದ ಅಂದವನ್ನು ಹೆಚ್ಚಿಸುತ್ತದೆ. ಮಹಿಳೆಯರಿಗೆ ಎಷ್ಟೇ ಲಿಪ್ ಸ್ಟಿಕ್ ವ್ಯಾಮೋಹವಿದ್ದರೂ ಅದನ್ನು ಹಚ್ಚಿಕೊಳ್ಳುವ ಸರಿಯಾದ ವಿಧಾನ ಕೆಲವರಿಗೆ ತಿಳಿದಿಲ್ಲ. ಅಂತವರಿಗೆ ಕೆಲ ಸಲಹೆಗಳು ಇಲ್ಲಿವೆ.
ಮೊಟ್ಟ ಮೊದಲನೇಯದಾಗಿ ಲಿಪ್ ಸ್ಟಿಕ್ ಹಚ್ಚಿಕೊಳ್ಳುವಾಗ ತುಟಿ ಸ್ವಚ್ಛವಾಗಿರಬೇಕು. ತುಟಿ ಸ್ವಚ್ಛವಾಗಿರದಿದ್ದರೆ ಲಿಪ್ ಸ್ಟಿಕ್ ಬಿರುಕು ಮೂಡಿದಂತೆ ಅನಿಸುತ್ತದೆ.
ತುಟಿಯನ್ನು ಸ್ಕ್ರಬ್ ಸಹಾಯದಿಂದ ಆಗಾಗ ಸ್ವಚ್ಛಗೊಳಿಸಿ. ಇದರಿಂದ ತುಟಿ ಮೃದುವಾಗಿರುತ್ತದೆ.
ತುಟಿಯನ್ನು ಒದ್ದೆಯಾಗಿಡಲು ಲಿಪ್ ಬಮ್ ಅಥವಾ ಗ್ಲಿಸರಿನ್ ಬಳಸಿ.
ಫ್ರಿಜ್ನಲ್ಲಿರುವ ʼಐಸ್ ಟ್ರೇʼ ಸ್ವಚ್ಛಗೊಳಿಸುವ ಸುಲಭ ವಿಧಾನ
ಲಿಪ್ ಸ್ಟಿಕ್ ಹಚ್ಚುವ ಮುನ್ನ ತಿಳಿ ಬಣ್ಣದ ಪೆನ್ಸಿಲ್ ನಿಂದ ಔಟ್ ಲೈನ್ ಮಾಡಿಕೊಳ್ಳಿ. ಇದರಿಂದ ಲಿಪ್ ಸ್ಟಿಕ್ ಹಚ್ಚಲು ಅನುಕೂಲವಾಗುತ್ತದೆ ಮತ್ತು ಲಿಪ್ ಸ್ಟಿಕ್, ಹೆಚ್ಚು ಅವಧಿಯ ತನಕ ನಿಲ್ಲುತ್ತದೆ.
ಲಿಪ್ ಸ್ಟಿಕ್ ಮೊದಲ ಕೋಟ್ ಹಚ್ಚಿದೊಡನೆ ಅದನ್ನು ಒಮ್ಮೆ ಮೃದುವಾಗಿ ಒರೆಸಿ. ಇದರಿಂದ ಲಿಪ್ ಸ್ಟಿಕ್ ಸರಿಯಾಗಿ ಕೂರುತ್ತದೆ ಮತ್ತು ಹರಡುವ ಭಯ ಇರುವುದಿಲ್ಲ.
ಲಿಪ್ ಸ್ಟಿಕ್ ಹಚ್ಚಿದ ನಂತರ ಬೆರಳಿನಿಂದ ಸ್ವಲ್ಪ ಪೌಡರ್ ಹಚ್ಚಿ. ಇದರಿಂದ ಲಿಪ್ ಸ್ಟಿಕ್ ಸರಿಯಾಗಿ ಸೆಟ್ ಆಗುತ್ತದೆ.
ಲಿಪ್ ಸ್ಟಿಕ್ ಅನ್ನು ಫ್ರಿಜ್ ನಲ್ಲಿಡಿ. ಫ್ರಿಜ್ ನಲ್ಲಿ ಇಡುವುದರಿಂದ ಲಿಪ್ ಸ್ಟಿಕ್ ಹೆಚ್ಚು ಕರಗುವುದಿಲ್ಲ.