alex Certify ತುಂಬು ಗರ್ಭಿಣಿಯಾಗಿದ್ದರೂ ಸಖತ್ತಾಗಿ ವರ್ಕೌಟ್‌ ಮಾಡ್ತಿದ್ದಾರೆ ಈ ನಟಿ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತುಂಬು ಗರ್ಭಿಣಿಯಾಗಿದ್ದರೂ ಸಖತ್ತಾಗಿ ವರ್ಕೌಟ್‌ ಮಾಡ್ತಿದ್ದಾರೆ ಈ ನಟಿ!

ದಕ್ಷಿಣದ ಖ್ಯಾತ ನಟಿ ಕಾಜಲ್‌ ಅಗರ್ವಾಲ್‌ ಸದ್ಯದಲ್ಲೇ ಅಮ್ಮನಾಗಿ ಭಡ್ತಿ ಪಡೆಯಲಿದ್ದಾರೆ. ತುಂಬು ಗರ್ಭಿಣಿ ಕಾಜಲ್‌ ಗೆ ಇತ್ತೀಚೆಗಷ್ಟೆ ಸೀಮಂತ ಕಾರ್ಯವೂ ನೆರವೇರಿತ್ತು. ಇದೀಗ ಕಾಜಲ್‌ ತಮ್ಮ ವರ್ಕೌಟ್‌ ವಿಡಿಯೋ ಒಂದನ್ನು ಇನ್‌ ಸ್ಟಾಗ್ರಾಮ್ನಲ್ಲಿ ಶೇರ್‌ ಮಾಡಿದ್ದಾರೆ.

ಗರ್ಭಿಣಿಯಾಗಿದ್ದರೂ ಸಲೀಸಾಗಿ ಏರೋಬಿಕ್ಸ್‌, ಪೈಲೆಟ್ಸ್‌ ಸೇರಿದಂತೆ ಇತರ ವ್ಯಾಯಾಮಗಳನ್ನು ಕಾಜಲ್‌ ಮಾಡ್ತಿದ್ದಾರೆ. ಈ ಮೂಲಕ ಗರ್ಭಾವಸ್ಥೆಯಲ್ಲಿಯೂ ಚಟುವಟಿಕೆಯಿಂದ ಇರಬೇಕು ಅನ್ನೋದನ್ನು ಕಾಜಲ್‌ ತೋರಿಸಿಕೊಟ್ಟಿದ್ದಾರೆ.

ನೇರಳೆ ಬಣ್ಣದ ಸ್ಪೋರ್ಟ್ಸ್‌ ಬ್ರಾ, ಅದಕ್ಕೊಪ್ಪುವ ಜಾಕೆಟ್‌ ಹಾಗೂ ವರ್ಕೌಟ್‌ ಪ್ಯಾಂಟ್‌ ಧರಿಸಿದ್ದ ಕಾಜಲ್‌ ಮುಖದಲ್ಲಿ ಹೊಸ ಕಳೆಯಿತ್ತು. ತುಂಬು ಗರ್ಭಿಣಿಯಾಗಿದ್ದರೂ ಫಿಟ್ನೆಸ್‌ ಕಾಪಾಡಿಕೊಳ್ಳಲು ವ್ಯಾಯಾಮದಿಂದಲೇ ಸಾಧ್ಯವಾಗಿದೆ ಅಂತ ಕಾಜಲ್‌ ಹೇಳಿಕೊಂಡಿದ್ದಾರೆ.

ಕ್ಲಿಷ್ಟಕರ ಪ್ರೆಗ್ನೆನ್ಸಿ ಅಲ್ಲದೇ ಇದ್ದಲ್ಲಿ, ಎಲ್ಲಾ ಗರ್ಭಿಣಿಯರೂ ವ್ಯಾಯಾಮ ಮಾಡಬಹುದು ಅಂತಾ ಸಲಹೆ ಕೊಟ್ಟಿದ್ದಾರೆ. 2020ರಲ್ಲಿ ಕಾಜಲ್‌, ಬಾಲ್ಯದ ಗೆಳೆಯ ಗೌತಮ್‌ ಕಿಚ್ಲು ಅವರನ್ನು ವಿವಾಹವಾಗಿದ್ದರು. 2022ರ ಆರಂಭದಲ್ಲೇ ತಾವು ತಾಯಿಯಾಗ್ತಿರೋ ಸಿಹಿ ಸುದ್ದಿಯನ್ನು ಕಾಜಲ್‌ ಹಂಚಿಕೊಂಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...