ತನ್ನ ಪ್ರೇಯಸಿಗೆ ಪ್ರಪೋಸ್ ಮಾಡಲು ಮೊಣಕಾಲಿನ ಮೇಲೆ ನಿಂತ ವ್ಯಕ್ತಿಯೊಬ್ಬ ಆಕೆಯಿಂದ ಕಪಾಳಮೋಕ್ಷ ಮಾಡಿಸಿಕೊಂಡಿದ್ದು, ಅವನು ಪೂಜೆ ಮಾಡಿಸಿಕೊಂಡ ಪ್ರಸಂಗವನ್ನು ಸಾವಿರಾರು ಜನರು ಕಣ್ಣುತುಂಬಿಕೊಂಡರು.
ಯುಎಸ್‌ಎನಲ್ಲಿ ಟೊರೊಂಟೊ ಬ್ಲೂ ಜೇಸ್ ಮತ್ತು ಬೋಸ್ಟನ್ ರೆಡ್ ಸಾಕ್ಸ್ ನಡುವಿನ ಪ್ರಮುಖ ಲೀಗ್ ಬಾಸ್ಕೆಟ್‌ಬಾಲ್ ಆಟದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಕ್ರೀಡಾಂಗಣದ ಸ್ಟ್ಯಾಂಡ್‌ನ ಮೆಟ್ಟಿಲುಗಳ ಮೇಲೆ ಒಬ್ಬ ವ್ಯಕ್ತಿ ತನ್ನ ಸಂಗಾತಿ ತಬ್ಬಿಕೊಳ್ಳುವುದರಿಂದ ರೀಲ್ ಆರಂಭವಾಗುತ್ತದೆ. ಒಂದು ಕಿಸ್ ಮತ್ತು ಕೆಲವು ಮಾತು ಹಂಚಿಕೊಂಡ ನಂತರ ಆ ವ್ಯಕ್ತಿ ತನ್ನ ಮೊಣಕಾಲುಗಳ ಮೇಲೆ ನಿಂತು ಅವಳಿಗೆ ಮದುವೆಯ ಪ್ರಸ್ತಾಪ ಮಾಡಿದ್ದಾನೆ. ಗೆಳತಿಗೆ ಈ ಹಠಾತ್ ಗೆಸ್ಚರ್ ಆಶ್ಚರ್ಯ ಉಂಟು ಮಾಡಿತು.
ಈ ಕ್ಷಣವನ್ನು ಸೆರೆಹಿಡಿಯಲು ಜೋಡಿಯ ಹಿಂದಿನ ಕ್ಯಾಮರಾಮನ್ ಸಿದ್ಧರಾಗಿದ್ದರು. ಅದರೆ, ಘಟನೆಯು ಆಘಾತಕಾರಿ ತಿರುವಿನಲ್ಲಿ ಕೊನೆಗೊಂಡಿತು. ಈ ವ್ಯಕ್ತಿ ತನ್ನ ಜೀನ್ಸ್ ಪಾಕೆಟ್‌ನಿಂದ ಉಂಗುರದ ಬಾಕ್ಸ್ ಹೊರತೆಗೆದನ್ನು, ಅಲ್ಲಿ ಉಂಗುರ ಇರಲಿಲ್ಲ. ಉಂಗುರದ ಆಕಾರದಲ್ಲಿದ್ದ ಸಿಹಿ ಚಾಕೋಲೇಟ್ ರೀತಿ ವಸ್ತುವಿತ್ತು.
ಇದರಿಂದ ಕೆರಳಿದ ಯುವತಿ ಕಪಾಳಮೋಕ್ಷ ಮಾಡಿ ಅಲ್ಲಿಂದ ತೆರಳಿದ್ದಾಳೆ. ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಈ ಸಂಪೂರ್ಣ ಘಟನೆಯನ್ನು ನಂಬಲಾಗದೆ ವೀಕ್ಷಿಸಿದರು.
ಈ ರೀಲ್‌ಗೆ ಬಗೆ ಬಗೆಯ ಕಾಮೆಂಟ್ ಬಂದಿದ್ದು, ಕೆಲವರು ಆಕೆಯ ಅತಿಯಾದ ವರ್ತನೆಯನ್ನು ಟೀಕಿಸಿದರೆ, ಮತ್ತೆ ಕೆಲವರು ಆತನನ್ನು ತರಾಟೆಗೆ ತೆಗೆದುಕೊಂಡರು.
6 ವರ್ಷಗಳ ರಿಲೇಷನ್ ಶಿಪ್ ನಂತರ ವ್ಯಕ್ತಿಯೊಬ್ಬ ತನ್ನ ಗೆಳತಿಯ ಪ್ರಪೋಸಲ್ ಚೇಷ್ಟೆ ಮಾಡಿದ ವೀಡಿಯೋ ಕಳೆದ ವರ್ಷ ವೈರಲ್ ಆಗಿತ್ತು. ಒಬ್ಬ ವ್ಯಕ್ತಿ ತನ್ನ ಗೆಳತಿಯ ಮುಂದೆ ಆಭರಣ ಪೆಟ್ಟಿಗೆಯೊಂದಿಗೆ ಮಂಡಿಯೂರಿ ಕುಳಿತಿರುವುದನ್ನು ವೀಡಿಯೊ ತೋರಿಸಿದೆ. ಆಭರಣದ ಪೆಟ್ಟಿಗೆಯಲ್ಲಿ ಕಿವಿಯೋಲೆಗಳು ಇದ್ದವು, ಪ್ರಸ್ತಾಪದ ಉಂಗುರವಲ್ಲ ಎಂದು ತಿಳಿದಾಗ ಹುಡುಗಿ ಆಘಾತಕ್ಕೊಳಗಾಗಿದ್ದಳು.