ಕಚೇರಿಯಲ್ಲಿ 8 ಗಂಟೆಗಳ ಕಾಲ ಕುಳಿತು ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ನೀವೂ ಇವ್ರಲ್ಲಿ ಒಬ್ಬರಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ತುಂಬಾ ಸಮಯ ಕುಳಿತು ಕೆಲಸ ಮಾಡೋದು ಮೆದುಳಿನ ರಕ್ತ ಪ್ರಸರಣವನ್ನು ನಿಧಾನಗೊಳಿಸುತ್ತದೆಯಂತೆ. ಇದು ಜೀವಕ್ಕೆ ಮಾರಕವೆಂದು ಸಂಶೋಧನೆಯಲ್ಲಿ ಹೇಳಲಾಗಿದೆ.
ಕಚೇರಿಯಲ್ಲಿ ಕೆಲಸ ಮಾಡುವ ಕೆಲ ವ್ಯಕ್ತಿಗಳ ಮೇಲೆ ಈ ಸಂಶೋಧನೆ ನಡೆದಿದೆ. ತುಂಬಾ ಸಮಯ ಒಂದೇ ಕಡೆ ಕುಳಿತು ಕೆಲಸ ಮಾಡುವುದು ಮೆದುಳಿಗೆ ಹಾನಿಕರ. ಅರ್ಧ ಗಂಟೆಗೊಮ್ಮೆ ಎದ್ದು, 2 ನಿಮಿಷ ಅತ್ತಿಂದಿತ್ತ ಓಡಾಡಿದ್ರೆ ತೊಂದರೆಯಿಲ್ಲ. ರಕ್ತ ಸಂಚಾರ ಸುಗಮವಾಗಲಿದೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ.
ಮೆದುಳಿಗೆ ರಕ್ತ ಸಂಚಾರವಾಗುವುದು ಒಂದು ಸಾಮಾನ್ಯ ಪ್ರಕ್ರಿಯೆ. ರಕ್ತ ಸಂಚಾರ ಮೆದುಳನ್ನು ಆರೋಗ್ಯವಾಗಿಡುತ್ತದೆ. ರಕ್ತ ಸಂಚಾರದಲ್ಲಿ ವ್ಯತ್ಯಯವಾದ್ರೆ ಅನೇಕ ಖಾಯಿಲೆಗಳು, ಸಮಸ್ಯೆಗಳು ಕಾಡಲು ಶುರುವಾಗುತ್ತವೆ.
ಹಿಂದೆ ನಡೆದ ಅಧ್ಯಯನ ಕೂಡ ಇದನ್ನೇ ಹೇಳಿದೆ. ರಕ್ತ ಸಂಚಾರದಲ್ಲಿ ವ್ಯತ್ಯಾಸವಾದ್ರೆ ಯೋಚನೆ, ಗುರುತಿಸುವಿಕೆ ಮೇಲೆ ಪ್ರಭಾವ ಬೀರುತ್ತದೆ. ಬುದ್ಧಿಮಾಂದ್ಯತೆ ಮತ್ತು ಮೆಮೊರಿ ಲಾಸ್ ಸಮಸ್ಯೆ ಕಾಡುವ ಸಾಧ್ಯತೆಯೂ ಇದೆ.