ಕೊರೊನಾ ವೈರಸ್ ಸೋಂಕು ಬರದಂತೆ ಕಾಪಾಡಲು ಮಾಸ್ಕ್ ಧರಿಸುವುದು ಬೆಸ್ಟ್. ಮನೆಯಿಂದ ಹೊರಗೆ ಬರುವ ಜನರು ಮಾಸ್ಕ್ ಧಾರಣೆ ಒಳ್ಲೇಯದೇ. ಆದರೆ ಅನೇಕ ಗಂಟೆ ಮಾಸ್ಕ್ ಧರಿಸುವುದ್ರಿಂದ ಚರ್ಮದ ಸಮಸ್ಯೆಯುಂಟಾಗುತ್ತದೆ. ಅಲರ್ಜಿ ಗುಳ್ಳೆ, ಕಿರಿಕಿರಿ, ತುರಿಕೆ ಕಾಡುತ್ತದೆ. ಕೆಲ ಮನೆ ಮದ್ದಿನಿಂದ ಮುಖದ ಚರ್ಮದ ಮೇಲಾಗುವ ಸಮಸ್ಯೆ ಕಡಿಮೆಯಾಗುತ್ತದೆ.
ದೀರ್ಘ ಕಾಲದವರೆಗೆ ಫೇಸ್ ಮಾಸ್ಕ್ ಧರಿಸುವ ಮೊದಲು ಮುಖದ ಮೇಲೆ ತೈಲ ಆಧಾರಿತ ಮಾಯಿಶ್ಚರೈಸರ್ ಅನ್ವಯಿಸಿ. ಇದು ಚರ್ಮದ ತೇವಾಂಶವನ್ನು ರಕ್ಷಿಸುತ್ತದೆ. ಇದರಿಂದ ಗುಳ್ಳೆ ಉಂಟಾಗುವ ಸಾಧ್ಯತೆ ಕಡಿಮೆ.
ಬ್ಯಾಕ್ಟೀರಿಯಾದ ಸೋಂಕನ್ನು ತಪ್ಪಿಸುವ ಮಾರ್ಗವೆಂದರೆ ದೀರ್ಘ ಕಾಲದವರೆಗೆ ಮಾಸ್ಕ್ ಧರಿಸುವ ಬದಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಕೆಲ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗುತ್ತದೆ. 6 ರಿಂದ 8 ಗಂಟೆಗಳ ನಂತ್ರ ಮಾಸ್ಕ್ ಬದಲಿಸಿ. ಸ್ವಚ್ಛವಾದ ಹತ್ತಿ ಬಟ್ಟೆಯಲ್ಲಿ ಮುಖ ಕ್ಲೀನ್ ಮಾಡಿ.
ಮಾಸ್ಕ್ ಪ್ರತಿದಿನ ತೊಳೆಯಿರಿ. ಶುಷ್ಕವಿರುವಾಗ ಮುಖವಾಡ ಧರಿಸಬೇಡಿ. ಮುಖ ಹಾಗೂ ಗಲ್ಲ ಮುಚ್ಚುವಂತೆ ಮಾಸ್ಕ್ ಧರಿಸಿ. ಉತ್ತಮ ಬ್ರ್ಯಾಂಡ್ ನ ಮಾಯಿಶ್ಚರೈಸರ್ ಬಳಸಿ.