ಪ್ರಪಂಚದಲ್ಲಿ ಕೆಲವೊಂದು ಕೆಲಸವನ್ನು ಜನರು ತುಂಬಾ ಸಮಯ ಮಾಡಬಾರದು. ವಿಷ್ಣು ಪುರಾಣದಲ್ಲಿ ಯಾವ ಮೂರು ಕೆಲಸಗಳನ್ನು ತುಂಬಾ ಸಮಯ ಮಾಡಬಾರದು ಎಂಬುದನ್ನು ಹೇಳಲಾಗಿದೆ.
ಮಹಿಳೆಯಿರಲಿ ಪುರುಷ ತುಂಬಾ ಸಮಯ ಮಲಗಬಾರದು. ಬೆಳಿಗ್ಗೆ ಏಳಲು ಬ್ರಹ್ಮ ಮುಹೂರ್ತ ಒಳ್ಳೆಯದು. ಈ ಸಮಯದಲ್ಲಿ ಎದ್ರೆ ಸ್ವಚ್ಛ ಹಾಗೂ ಶುದ್ಧ ವಾತಾವರಣ ಸಿಗುತ್ತದೆ. ಸೂರ್ಯ ನೆತ್ತಿಗೆ ಬರುವವರೆಗೆ ಮಲಗಬಾರದು.
ಹಾಗೆ ಸ್ನಾನ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಬಾರದು ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ. ಸ್ನಾನ ಮಾಡಲು ತುಂಬಾ ಸಮಯ ತೆಗೆದುಕೊಂಡ್ರೆ ಅನಾರೋಗ್ಯ ಕಾಡುತ್ತದೆ. ದೀರ್ಘಕಾಲ ಸ್ನಾನ ಮಾಡಿದ್ರೆ ಕೆಮ್ಮು, ಶೀತದ ಅಪಾಯವಿರುತ್ತದೆ.
ಮಹಿಳೆ ಹಾಗೂ ಪುರುಷರಿಬ್ಬರೂ ಹೆಚ್ಚು ಮಾತನಾಡಬಾರದು. ವಿಷ್ಣು ಪುರಾಣದ ಪ್ರಕಾರ, ಅತಿಯಾಗಿ ಮಾತನಾಡುವುದರಿಂದ ವ್ಯಕ್ತಿಯ ಪಾತ್ರ ಕೆಟ್ಟದು ಎಂದು ಹೇಳಲಾಗುತ್ತದೆ. ಅವನನ್ನು ನಿಷ್ಪ್ರಯೋಜಕ ವ್ಯಕ್ತಿ ಎಂದು ಕರೆಯಲಾಗುತ್ತದೆ.