ದೀರ್ಘಕಾಲದವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳೋದು ಬಹಳ ಅಪಾಯಕಾರಿ. ಮೂತ್ರ ಬಂದಾಗಲೆಲ್ಲ ತಕ್ಷಣವೇ ಬಾತ್ ರೂಮಿಗೆ ಹೋಗಿ. ಕಾಲಕಾಲಕ್ಕೆ ಸರಿಯಾಗಿ ಮೂತ್ರ ವಿಸರ್ಜಿಸಿ. ನಿಮಗೆ ಮೂತ್ರ ವಿಸರ್ಜನೆ ಮಾಡಬೇಕು ಎನಿಸಿದೆ ಅಂದ್ರೆ ನಿಮ್ಮ ದೇಹದಿಂದ ತ್ಯಾಜ್ಯ ಕೂಡಲೇ ಹೊರ ಹೋಗಬೇಕು ಎಂದರ್ಥ.
ಮೂತ್ರ ವಿಸರ್ಜನೆ ಪ್ರಕ್ರಿಯೆಯಲ್ಲಿ ವಿವಿಧ ಸ್ನಾಯುಗಳು, ಅಂಗಾಂಗಗಳು, ನರಗಳು ಕೂಡ ಒಳಗೊಂಡಿರುತ್ತವೆ. ನಿಮ್ಮ ಮೂತ್ರಕೋಶಕ್ಕೆ ಕೇವಲ 2 ಕಪ್ ನೀರನ್ನು ಹಿಡಿದಿಟ್ಟುಕೊಳ್ಳುವಷ್ಟು ಸಾಮರ್ಥ್ಯವಿದೆ. ಹಾಗಾಗಿ ಅರ್ಜೆಂಟಾಗಿದೆ ಎನಿಸಿದ ತಕ್ಷಣ ಮೂತ್ರ ಮಾಡಿ.
ಆಗಾಗ ನಿಯಮಿತವಾಗಿ ಮೂತ್ರ ವಿಸರ್ಜಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಹಾಗೆ ಮಾಡದೇ ಇದ್ರೆ ಇನ್ಫೆಕ್ಷನ್ ಉಂಟಾಗಬಹುದು. ದೀರ್ಘ ಸಮಯದ ವರೆಗೆ ಮೂತ್ರ ಬ್ಲಾಡಾರ್ ನಲ್ಲೇ ಇದ್ರೆ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ.
ಸೂಕ್ತ ಸಮಯದಲ್ಲಿ ಮೂತ್ರ ವಿಸರ್ಜನೆ ಮಾಡದೇ ಇರುವುದರಿಂದ ಕಿಡ್ನಿ ಇನ್ಫೆಕ್ಷನ್ ಅಥವಾ ಡ್ಯಾಮೇಜ್ ಆಗುವ ಸಾಧ್ಯತೆಗಳು ಕೂಡ ಇರುತ್ತವೆ. ಎನ್ ಲಾರ್ಜ್ಡ್ ಪ್ರಾಸ್ಟೇಟ್, ನ್ಯೂರೋಜೆನಿಕ್ ಬ್ಲಾಡಾರ್, ಕಿಡ್ನಿ ಸಮಸ್ಯೆಗಳು, ಯೂರಿನರಿ ರಿಟೆನ್ಷನ್ ಇದ್ರೆ ಅಂಥವರು ಸರಿಯಾದ ಸಮಯಕ್ಕೆ ಮೂತ್ರ ವಿಸರ್ಜಿಸಲೇಬೇಕು.
ಗರ್ಭಿಣಿಯರಲ್ಲಿ ಇನ್ಫೆಕ್ಷನ್ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಅವರು ಯಾವುದೇ ಕಾರಣಕ್ಕೂ ಮೂತ್ರ ಕಟ್ಟಿಕೊಳ್ಳಬಾರದು. ಹಾಗಾಗಿ ಚೆನ್ನಾಗಿ ನೀರು ಕುಡಿಯಿರಿ, ಕಾಲ ಕಾಲಕ್ಕೆ ಮೂತ್ರ ವಿಸರ್ಜಿಸಿ. ಮೂತ್ರ ಕೋಶ ಆರೋಗ್ಯವಾಗಿದ್ದರೆ ನಿಮ್ಮ ಕಿಡ್ನಿ ಕೂಡ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ.