ಚಿಕ್ಕಬಳ್ಳಾಪುರ : ನಾಗಲ್ಯಾಂಡ್ ನಲ್ಲಿ ಸಿ ಆರ್ ಪಿ ಎಫ್ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಕರ್ನಾಟಕದ ಯೋಧ ಹುತಾತ್ಮರಾಗಿದ್ದು, ಇಂದು ಗ್ರಾಮಕ್ಕೆ ಅವರ ಪಾರ್ಥಿವ ಶರೀರ ಆಗಮಿಸಲಿದೆ.
ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೇರದಾಳದ ಟಿ.ಜಿ. ಸತೀಶ್ ಹುತಾತ್ಮ ಯೋಧರಾಗಿದ್ದಾರೆ. ಇವರು ನಾಗಲ್ಯಾಂಡ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ತೀವ್ರ ಚಳಿಗೆ ಒಳಗಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
BIG BREAKING: ನಾಯಕತ್ವ ಬದಲಾವಣೆ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ: ಬೊಮ್ಮಾಯಿಗೆ ಬಹುಪರಾಕ್
ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದ ಸುದ್ದಿ ಸಿಡಿಲಿನಂತೆ ರಾಜ್ಯಕ್ಕೆ ಅಪ್ಪಳಿಸಿದ್ದು, ತೀವ್ರ ಚಳಿ ಹಾಗೂ ಕನಿಷ್ಠ ತಾಪಮಾನದಿಂದಾಗಿ ಹುತಾತ್ಮರಾಗಿದ್ದಾರೆ ಎಂದು ಸಿ ಆರ್ ಪಿ ಎಫ್ ಮೂಲಗಳು ತಿಳಿಸಿವೆ.
ಹುತಾತ್ಮ ಯೋಧರ ಪಾರ್ಥಿವ ಶರೀರ ಇಂದು ಸ್ವಗ್ರಾಮಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್ ಯೋಧರ ಅಂತಿಮ ದರ್ಶನ ಪಡೆಯಲಿದ್ದಾರೆ.
ಯೋಧರ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಮೆರವಣಿಗೆ ಮೂಲಕ ತೆರಳಲಿದ್ದು, ತೊಂಡೇಭಾಯಿವಿಂದ ತೇರದಾಳದವರೆಗೂ ಮೆರವಣಿಗೆ ನಡೆಯಲಿದೆ. ದಾರಿಯುದ್ದಕ್ಕೂ ಹಾಗೂ ಗ್ರಾಮದಲ್ಲಿ ಜನರು ದರ್ಶನ ಪಡೆಯಲಿದ್ದಾರೆ. ಆ ನಂತರ ಸಕಲ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಕೆಯಾಗಲಿದೆ ಎನ್ನಲಾಗಿದೆ.