
ಜಾಗತಿಕ ತೈಲ ಬೆಲೆಗಳ ಏರಿಳಿತ ಮತ್ತು ವಿನಿಮಯ ದರದ ವ್ಯತ್ಯಾಸದಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಪಾಕಿಸ್ತಾನದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದಾಗಿ ದೇಶದ ಹೆಚ್ಚಿನ ಭಾಗಗಳು ಮುಳುಗಿದ್ದು 1500 ಮಂದಿ ಸಾವಿಗೆ ಕಾರಣವಾಗಿತ್ತು. ಪಾಕಿಸ್ತಾನದಲ್ಲಿ ಉಂಟಾದ ಪ್ರವಾಹದಿಂದಾಗಿ 33 ಮಿಲಿಯನ್ ಜನರು ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ರನ್ನು ಕೆಳಗಿಳಿಸಿದ ಬಳಿಕ ದೇಶದಲ್ಲಿ ಉಂಟಾದ ರಾಜಕೀಯ ಅಸ್ಥಿರತೆಯು ದೇಶವನ್ನು ಆರ್ಥಿಕ ದೃಷ್ಟಿಯಿಂದಲೂ ಕುಸಿಯುವಂತೆ ಮಾಡಿದೆ.
ಪಾಕಿಸ್ತಾನದಲ್ಲಿ ಪ್ರವಾಹದ ನೀರು ಕಡಿಮೆಯಾಗಲು ಇನ್ನೂ ಎರಡರಿಂದ ಆರು ತಿಂಗಳು ಸಮಯ ಬೇಕು ಎಂದು ಮಾಧ್ಯಮಗಳು ವರದಿ ಮಾಡಿವೆ. ನಿಂತ ನೀರಿನಿಂದಾಗಿ ದೇಶದಲ್ಲಿ ಮಲೇರಿಯಾ, ಡೆಂಗ್ಯೂ, ಜ್ವರ, ಚರ್ಮ ಹಾಗೂ ಕಣ್ಣಿನ ಸೋಂಕುಗಳು ಮತ್ತು ತೀವ್ರ ಅತಿಸಾರದಂತಹ ಕಾಯಿಲೆಗಳು ಹುಟ್ಟಿಕೊಳ್ಳುತ್ತಿದೆ.