ಹುಟ್ಟಿದ ಮನುಷ್ಯ ತಪ್ಪುಗಳನ್ನು ಮಾಡಿಯೆ ಮಾಡ್ತಾನೆ. ಹುಟ್ಟಿನಿಂದ ಸಾಯುವವರೆಗೆ ಅನೇಕ ತಪ್ಪುಗಳು ನಡೆದಿರುತ್ತವೆ. ನಾವು ಮಾಡಿದ ಕೆಲವು ತಪ್ಪುಗಳು ಮಹಾ ಪಾಪಕ್ಕೆ ಸಮನಾಗಿರುತ್ತವೆ.
ನಮಗೆ ತಿಳಿಯದೇ ಈ ಮಹಾ ಪಾಪ ನಡೆದಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದಕ್ಕೂ ಪರಿಹಾರವಿದೆ. ತಿಳಿಯದೆ ಮಾಡಿದ ತಪ್ಪುಗಳ ಪರಿಹಾರಕ್ಕೂ ಉಪಾಯಗಳಿವೆ.
ಪ್ರತಿ ದಿನ ಹಸುವಿಗೆ ಆಹಾರವನ್ನು ನೀಡಿ. ಮನೆಯಲ್ಲಿ ಮಾಡಿದ ಮೊದಲ ರೊಟ್ಟಿಯನ್ನು ಹಸುವಿಗೆ ತೆಗೆದಿಡಿ. ಪ್ರತಿ ದಿನ ಹಸುವಿಗೆ ಆಹಾರ ನೀಡುತ್ತ ಬಂದ್ರೆ ನೀವು ಮಾಡಿದ ಪಾಪಗಳೆಲ್ಲ ಪರಿಹಾರವಾಗುತ್ತದೆ.
ಹುಡುಗಿಯರು ವ್ಯಾಯಾಮದ ವೇಳೆ ಸ್ಪೋರ್ಟ್ಸ್ ಬ್ರಾ ಧರಿಸೋದೇಕೆ…?
ಪ್ರತಿ ದಿನ ಮರದ ಬೇರುಗಳ ಬಳಿಯಿರುವ ಇರುವೆಗಳಿಗೆ 10 ಗ್ರಾಂ ಹಿಟ್ಟನ್ನು ಹಾಕಿ. ಗೋಧಿ ಹಿಟ್ಟನ್ನು ಇರುವೆಗಳಿಗೆ ಹಾಕಬಹುದು.
ಪ್ರತಿ ದಿನ ಹಕ್ಕಿಗಳಿಗೆ ಕಾಳುಗಳನ್ನು ಹಾಕಿ. ಮನೆಯ ಮುಂದೆ ಅಥವಾ ಟೆರೆಸ್ ಮೇಲೆ ಹಕ್ಕಿಗಳು ಬರುತ್ತವೆ. ಪ್ರತಿ ದಿನ ನಿಗದಿತ ಜಾಗದಲ್ಲಿ ಕೆಲ ಕಾಳುಗಳನ್ನು ಹಾಕಿಡಿ. ಜೊತೆಗೆ ಒಂದು ಪಾತ್ರೆಯಲ್ಲಿ ನೀರನ್ನು ಇಡಲು ಮರೆಯಬೇಡಿ.
ಪ್ರತಿ ದಿನ ಭೋಜನ ಸಿದ್ಧವಾದ್ಮೇಲೆ ಅದನ್ನು ಅಗ್ನಿಗೆ ಅರ್ಪಿಸಿ. ತುಪ್ಪ ಹಾಗೂ ಸಕ್ಕರೆಯನ್ನು ಹಾಕಿ ಅಗ್ನಿಗೆ ನೀಡಬೇಕು.
ಮನೆಗೆ ಬರುವ ಭಿಕ್ಷುಕನಿಗೆ ಹಾಳಾದ ಆಹಾರವನ್ನು ಎಂದೂ ನೀಡಬೇಡಿ.
ಮನೆಗೆ ಬರುವ ಅತಿಥಿ ಮನಸ್ಸು ನೋಯಿಸಬೇಡಿ. ಮನೆಯಲ್ಲಿರುವಷ್ಟು ಸಮಯ ಸಂತೋಷವಾಗಿ ನೋಡಿಕೊಳ್ಳಿ.