ತಣ್ಣಗಿನ ಐಸ್ ಕ್ರೀಂ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ…? ಎಳೆಯರಿಂದ ಹಿಡಿದು ದೊಡ್ಡವರ ಬಾಯಲ್ಲೂ ಐಸ್ ಕ್ರೀಂ ಎಂದರೆ ನೀರು ಬರುತ್ತದೆ. ಇಲ್ಲಿ ಸುಲಭವಾಗಿ ಮನೆಯಲ್ಲಿಯೇ ಮಾಡುವ ರೋಸ್ ಕುಲ್ಫಿ ವಿಧಾನವಿದೆ ಒಮ್ಮೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
ದಪ್ಪನೆಯ ಕೆನೆ-275 ಎಂಎಲ್, ಕಂಡೆನ್ಸ್ಡ್ ಮಿಲ್ಕ್- 3/4 ಕಪ್, ಹಾಲು- 1 ½ ಕಪ್, ರೋಸ್ ಸಿರಪ್- 1/3 ಕಪ್, ಏಲಕ್ಕಿ ಪುಡಿ- 1/2 ಟೀ ಸ್ಪೂನ್, ರೋಸ್ ಎಸೆನ್ಸ್- 1 ಟೀ ಸ್ಪೂನ್.
ಒಂದು ಅಗಲವಾದ ಬೌಲ್ ಗೆ ದಪ್ಪನೆಯ ಕೆನೆ ಹಾಕಿ ಚೆನ್ನಾಗಿ ಬೀಟ್ ಮಾಡಿಕೊಳ್ಳಿ. ಇದು ಕ್ರೀಮ್ ರೀತಿ ಬಂದರೆ ಸಾಕು.
ಇದಕ್ಕೆ ಕಂಡೆನ್ಸಡ್ ಮಿಲ್ಕ್, ಹಾಲು, ರೋಸ್ ಸಿರಪ್, ರೋಸ್ ಎಸೆನ್ಸ್, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕುಲ್ಫಿ ಮೌಲ್ಡ್ ಗೆ ಹಾಕಿ 8 ಗಂಟೆಗಳ ಕಾಲ ಫ್ರಿಜರ್ ನಲ್ಲಿಡಿ. ನಂತರ ಇದನ್ನು ತೆಗೆದು ಸವಿಯಿರಿ.