ತಮ್ಮ ಮಗಳು ಹಣೆಗೆ ತಿಲಕ ಧರಿಸಿ ಶಾಲೆಗೆ ಹೋದ ಕಾರಣ ಶಾಲಾ ಶಿಕ್ಷಕರೊಬ್ಬರು ಆಕೆಯನ್ನು ಥಳಿಸಿದ್ದಾರೆ ಎಂದು ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಹಿಂದೂ ಕುಟುಂಬವೊಂದು ಆರೋಪಿಸಿದೆ. ನಿಸಾರ್ ಅಹಮದ್ ಎಂದು ಗುರುತಿಸಲಾದ ಶಿಕ್ಷಕನನ್ನು ಇದೀಗ ರಜೌರಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಅಮಾನತುಗೊಳಿಸಲಾಗಿದೆ.
ಖದುರಿಯನ್ ಪಂಚಾಯತ್ನ ಶಿಕ್ಷಕ ಇಬ್ಬರು ವಿದ್ಯಾರ್ಥಿನಿಯರನ್ನು ಥಳಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದೆ.
ವಿದ್ಯಾರ್ಥಿಗಳಿಗೆ ಈ ರೀತಿ ಹಿಂಸೆ ನೀಡುವುದು ಅಪರಾಧವಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323, 325, 352, ಹಾಗೂ 506ರ ಅಡಿಯಲ್ಲಿ ಯಾರಾದರೂ ಮಗುವಿನ ಮೇಲೆ ಅತಿಯಾಗಿ ಹಲ್ಲೆ ನಡೆಸಿದರೆ ಅವರು ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.