ನಾವು ತಿನ್ನುವ ತಿನಿಸು ಸಕ್ಕತ್ ಟೇಸ್ಟಿಯಾಗಿದ್ದಾಗ ಅಥವಾ ಸಮಯ ಇಲ್ಲದೆ ಗಡಿಬಿಡಿಯಲ್ಲಿ ತಿನ್ನುವಾಗ ತಟ್ಟೆಯಲ್ಲಿ ಹಸಿಮೆಣಸಿನ ಕಾಯಿ ಗೊತ್ತಿಲ್ಲದೆ ತಿಂದುಬಿಡುತ್ತೇವೆ.
ಹೀಗೆ ತಿಂದಾಗ ಖಾರ ಜಾಸ್ತಿ ಆಗಿ ಕಣ್ಣಲ್ಲಿ ನೀರು ತುಂಬಿ ತಕ್ಷಣ ಗಟಗಟ ನೀರು ಕುಡಿಯುವುದು ಸಾಮಾನ್ಯ. ಅಥವಾ ಪುಟ್ಟ ಮಕ್ಕಳಾದರೆ ಸಕ್ಕರೆ ಬೇಕು ಎಂದು ಹಠ ಮಾಡುತ್ತಾರೆ.
ಆದರೆ ಸಕ್ಕರೆ ಅಥವಾ ನೀರಿನಿಂದ ತಕ್ಷಣ ಖಾರ ಕಡಿಮೆ ಆಗುವುದಿಲ್ಲ. ಬದಲಿಗೆ ನಾಲಿಗೆಯ ಮೇಲೆ ಚಿಟಿಕೆ ಪುಡಿ ಉಪ್ಪು ಉದುರಿಸಿಕೊಂಡರೆ ತಕ್ಷಣ ಖಾರ ಕಡಿಮೆ ಆಗುತ್ತದೆ.