ಲವಂಗದ ಎಲೆಯನ್ನು ಭಾರತದ ಪ್ರತಿ ಮನೆಯಲ್ಲೂ ಮಸಾಲೆಯಾಗಿ ಬಳಸಲಾಗುತ್ತದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಅದರಲ್ಲಿರುವ ಔಷಧೀಯ ಗುಣಗಳ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಲವಂಗದ ಎಲೆಗಳನ್ನು ಅನೇಕ ರೋಗಗಳನ್ನು ಗುಣಪಡಿಸಲು ಬಳಸಬಹುದು.ದೇಹಕ್ಕೆ ಪ್ರಯೋಜನಕಾರಿಯಾದ ಪೊಟ್ಯಾಸಿಯಮ್, ತಾಮ್ರ, ಮ್ಯಾಂಗನೀಸ್, ಸತು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಸಿಯಮ್ನಂತಹ ಪ್ರಮುಖ ಪೋಷಕಾಂಶಗಳು ಲವಂಗದ ಎಲೆಗಳಲ್ಲಿವೆ.
ಲವಂಗದ ಎಲೆ ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನೀವು ಒತ್ತಡದಿಂದ ಬಳಲುತ್ತಿದ್ದರೆ ರಾತ್ರಿ ಮಲಗುವ ಮೊದಲು 2 ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಸುಟ್ಟು ನಿಮ್ಮ ಕೋಣೆಯಲ್ಲಿ ಇರಿಸಿ. ಇದರ ಹೊಗೆಯ ವಾಸನೆಯು ಒತ್ತಡ ನಿವಾರಿಸುತ್ತದೆ. ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿರುವವರು ಕೂಡ ಲವಂಗದ ಎಲೆಗಳನ್ನು ಬಳಸಬೇಕು.
ಒಂದು ಪಾತ್ರೆಯಲ್ಲಿ ನೀರಿಗೆ ಲವಂಗದ ಎಲೆಯನ್ನು ಹಾಕಿ ಕುದಿಸಿ. ನಂತರ ಈ ನೀರಿನಲ್ಲಿ ಬಟ್ಟೆಯನ್ನು ನೆನೆಸಿ ಎದೆಯ ಮೇಲೆ ಇಟ್ಟುಕೊಳ್ಳಿ, ಹೀಗೆ ಮಾಡುವುದರಿಂದ ಉಸಿರಾಟದ ಸಮಸ್ಯೆ ದೂರವಾಗುತ್ತದೆ.ಲವಂಗದ ಎಲೆಗಳು ಆಯಾಸವನ್ನು ಕೂಡ ಪರಿಹರಿಸಬಲ್ಲವು. ಇವುಗಳ ಅರೋಮಾಥೆರಪಿ ತೆಗೆದುಕೊಳ್ಳುವುದರಿಂದ, ದೇಹವು ವಿಶ್ರಾಂತಿ ಪಡೆಯುತ್ತದೆ. ಆಯಾಸವೂ ಪರಿಹಾರವಾಗುತ್ತದೆ.
ಲವಂಗದ ಎಲೆ ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಔಷಧಿಗಿಂತ ಕಡಿಮೆಯಿಲ್ಲ. ಇದರ ಸೇವನೆಯು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್, ಗ್ಲೂಕೋಸ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಸಕ್ಕರೆ ಕಾಯಿಲೆ ಇರುವವರು ಲವಂಗದ ಎಲೆಗಳನ್ನು ಅರೆದು ಪುಡಿ ಮಾಡಿ ಒಂದು ತಿಂಗಳು ತಿನ್ನಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.
ಲವಂಗದ ಎಲೆ ಅನೇಕ ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ. ಶೀತ, ನೆಗಡಿ, ಜ್ವರವನ್ನು ತಡೆಗಟ್ಟಲು ಲವಂಗದ ಎಲೆಯ ಕಷಾಯ ಮಾಡಿಕೊಂಡು ಕುಡಿಯಬಹುದು.