ಬೆಳಿಗ್ಗೆ ತಿಂಡಿಗೆ ಶ್ಯಾವಿಗೆ ಬಾತ್ ಇದ್ದರೆ ಚೆನ್ನಾಗಿರುತ್ತದೆ. ಅದಕ್ಕೆ ಮೊಟ್ಟೆ ಹಾಕಿ ಮಾಡಿದರೆ ತಿನ್ನುವುದಕ್ಕೆ ಇನ್ನೂ ರುಚಿಕರವಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಎಣ್ಣೆ – 3ಟೇಬಲ್ ಸ್ಪೂನ್, ಸೋಂಪು – 1 ಟೀ ಸ್ಪೂನ್, ಚಕ್ಕೆ – 1 ಪೀಸ್, ಏಲಕ್ಕಿ – 2, ಈರುಳ್ಳಿ – 1 ಸಣ್ಣಗೆ ಹೆಚ್ಚಿದ್ದು, ಹಸಿಮೆಣಸು – 2 ಸಣ್ಣಗೆ ಹೆಚ್ಚಿದ್ದು, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಸ್ಪೂನ್, ಟೊಮೆಟೊ – 2 ಸಣ್ಣಗೆ ಹೆಚ್ಚಿದ್ದು, ಖಾರದ ಪುಡಿ – 2 ಟೀ ಸ್ಪೂನ್, ಗರಂ ಮಸಾಲ – 1 ಟೀ ಸ್ಪೂನ್, ಅರಿಶಿನ – 1 ಟೀ ಸ್ಪೂನ್, ಹಸಿ ಬಟಾಣಿ – 1/2 ಕಪ್, ಉಪ್ಪು – ರುಚಿಗೆ ತಕ್ಕಷ್ಟು, ನೀರು – 2 ಕಪ್, ಶ್ಯಾವಿಗೆ – 1 ಕಪ್, ಮೊಟ್ಟೆ – 2.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದು ಬಿಸಿಯಾಗುತ್ತಲೇ ಅದಕ್ಕೆ ಸೋಂಪು, ಚಕ್ಕೆ, ಏಲಕ್ಕಿ ಹಾಕಿ ನಂತರ ಈರುಳ್ಳಿ , ಹಸಿಮೆಣಸು ಸೇರಿಸಿ ಫ್ರೈ ಮಾಡಿ ಟೊಮೆಟೊ ಹಾಕಿ ಇದು ಮೆತ್ತಗಾಗುತ್ತಿದ್ದಂತೆ ಉಪ್ಪು, ಖಾರದ ಪುಡಿ, ಗರಂ ಮಸಾಲ, ಅರಿಶಿನ ಪುಡಿ, ಹಸಿಬಟಾಣಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ನೀರು ಸೇರಿಸಿ. ಇದು ಕುದಿಯುತ್ತಿದ್ದಂತೆ ಇದಕ್ಕೆ ಶ್ಯಾವಿಗೆ ಹಾಕಿ ಬೇಯಿಸಿ.
ನಂತರ ಇದಕ್ಕೆ ಮೊಟ್ಟೆ ಒಡೆದು ಹಾಕಿ ಒಂದು ಮುಚ್ಚಳ ಮುಚ್ಚಿ 6 ನಿಮಿಷಗಳ ಕಾಲ ಬೇಯಿಸಿಕೊಂಡು ನಂತರ ಒಂದು ಸೌಟಿನ ಸಹಾಯದಿಂದ ಚೆನ್ನಾಗಿ ಮಿಕ್ಸ್ ಮಾಡಿ. ಸರ್ವ್ ಮಾಡಿ.