ಕೇವಲ ಒಂದು ತಿಂಗಳ ಹಿಂದಷ್ಟೇ ಹೊಸ ಬದುಕಿಗೆ ಕಾಲಿಟ್ಟಿದ್ದ ಯುವಕನೊಬ್ಬ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರ ಪತ್ನಿ ಸಹ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇಂಥದೊಂದು ದಾರುಣ ಘಟನೆ ಕಡೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಶಿವಪುರ ಗೇಟ್ ಬಳಿ ನಡೆದಿದ್ದು, ತರೀಕೆರೆ ದೊಡ್ಡಹಟ್ಟಿ ಬಡಾವಣೆಯ ಆನಂದ್ ಮೃತಪಟ್ಟಿದ್ದಾರೆ. ಅವರ ಪತ್ನಿ ರಂಜಿತಾ ಗಾಯಗೊಂಡಿದ್ದು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದಂಪತಿ ಸಂಬಂಧಿಕರ ಮದುವೆಗಾಗಿ ಬೈಕಿನಲ್ಲಿ ಕಡೂರು ತಾಲೂಕಿನ ಕಲ್ಲಾಪುರಕ್ಕೆ ತೆರಳಿದ್ದು, ವಾಪಸ್ ಬರುವ ವೇಳೆ ತರೀಕೆರೆ ಕಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಇದರ ಪರಿಣಾಮ ಆನಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.