ಪ್ರತಿಯೊಬ್ಬ ಮಹಿಳೆ ಪ್ರತಿ ತಿಂಗಳು ಅನುಭವಿಸುವ ನೋವನ್ನು ಹೇಳಿಕೊಳ್ಳಲಾರಳು. ಕೆಲವು ಮಹಿಳೆಯರು ಚಿತ್ರಹಿಂಸೆ ಅನುಭವಿಸುತ್ತಾರೆ. ಹೊಟ್ಟೆ ನೋವಿನ ಜೊತೆಗೆ ಕಾಲು ನೋವು, ಸೊಂಟ ನೋವು ಅವರನ್ನು ಬಾಧಿಸುತ್ತದೆ.
ಹಾರ್ಮೋನುಗಳ ಬದಲಾವಣೆಯಿಂದ ಈ ರೀತಿಯ ನೋವುಗಳು ಕಾಣಿಸಿಕೊಳ್ಳುತ್ತವೆ. ನೋವು ನಿವಾರಣೆಗೆ ಮಾರುಕಟ್ಟೆಗೆ ಸಾಕಷ್ಟು ಔಷಧಿಗಳು ಬಂದಿವೆ. ಆದರೆ ಅವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಪೇನ್ ಕಿಲ್ಲರ್ ಬದಲು ಮನೆಯಲ್ಲಿಯೇ ಕೆಲವೊಂದು ಆಹಾರವನ್ನು ಸೇವಿಸಿ, ತಿಂಗಳ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ನೆಮ್ಮದಿ ಕಾಣಬಹುದು.
ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಪ್ರಮಾಣ ಮಹಿಳೆಯರಲ್ಲಿ ಸಮ ಪ್ರಮಾಣದಲ್ಲಿರಬೇಕು. ಇಲ್ಲವಾದಲ್ಲಿ ಸ್ನಾಯು ಸೆಳೆತ ಜಾಸ್ತಿಯಾಗುತ್ತದೆ. ವೈದ್ಯರ ಸಲಹೆ ಪಡೆದು ಪ್ರತಿದಿನ ಈ ಟ್ಯಾಬ್ಲೆಟ್ ತೆಗೆದುಕೊಳ್ಳುವುದು ಉತ್ತಮ.
ಗ್ರೀನ್ ಟೀ ಕುಡಿಯುವುದರಿಂದಲೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಕ್ಯಾಲ್ಸಿಯಂ ಇರುವ ತರಕಾರಿಗಳನ್ನು ಅಧಿಕವಾಗಿ ಸೇವಿಸಬೇಕು. ತುಂಬಾ ನೋವು ಅನುಭವಿಸುವ ಮಹಿಳೆಯರು ಹೀಟಿಂಗ್ ಪ್ಯಾಡ್ ಇಟ್ಟುಕೊಂಡಿರಿ. ನೋವಾಗುವ ಜಾಗಕ್ಕೆ ಅದರಿಂದ ಮಸಾಜ್ ಮಾಡಿದರೆ ಸ್ನಾಯು ಸೆಳೆತ ಕಡಿಮೆಯಾಗುತ್ತದೆ.