ಆನ್ ಲೈನ್ ಆಟದ ಜಗಳ ತಾರಕಕ್ಕೇರಿ ಬಳಿಕ ಇದಕ್ಕೆ ಬಾಲಕನೊಬ್ಬ ಬಲಿಯಾಗಿರುವ ಆಘಾತಕಾರಿ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಮಾಶ್ಯಾಳ ಗ್ರಾಮದಲ್ಲಿ ನಡೆದಿದೆ.
ಬುಧವಾರದಂದು ಈ ಗ್ರಾಮದ 16 ವರ್ಷದ ಬಾಲಕ ಶಾಮರಾಯ ಪರೀಟ ಮತ್ತು 22 ವರ್ಷದ ಸಚಿನ್ ಎಂಬ ಯುವಕ ಆನ್ ಲೈನ್ ‘ಲುಡೂ’ ಗೇಮ್ ಆಟವಾಡುತ್ತಿದ್ದರು.
ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ಶುರುವಾಗಿದ್ದು, ಶಾಮರಾಯನ ಸಹೋದರ ಧರ್ಮರಾಜ ಇಬ್ಬರನ್ನೂ ಸಮಾಧಾನಪಡಿಸಿ ಕಳುಹಿಸಿದ್ದಾನೆ. ಆದರೆ ಒಳಗೊಳಗೆ ಕುದಿಯುತ್ತಿದ್ದ ಸಚಿನ್, ಚಾಕು ತಂದು ಶ್ಯಾಮರಾಯನ ಎದೆಗೆ ಇರಿದು ಕೊಲೆ ಮಾಡಿದ್ದಾನೆ.
ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಅಫಜಲ್ಪುರ ಠಾಣೆ ಪೊಲೀಸರು ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.