ಕೈವ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ತುರ್ತು ಎಚ್ಚರಿಕೆ ನೀಡಿದ ನಾಲ್ಕು ಗಂಟೆಗಳಲ್ಲಿ ಖಾರ್ಕಿವ್ನಿಂದ ಪಾರಾಗಲು ರಾಜ್ಯ ಸೇರಿದಂತೆ 3500ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು 10 ರಿಂದ 15 ಕಿಲೋಮೀಟರ್ ದೂರದವರೆಗೆ ಕಾಲ್ನಡಿಗೆಯಲ್ಲಿಯೇ ಸಾಗಿದ್ದರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ತಡರಾತ್ರಿ ಈ ವಿಚಾರವಾಗಿ ಸರಣಿ ಟ್ವೀಟ್ಗಳನ್ನು ಮಾಡಿದ ಸಚಿವ ಡಾ.ಕೆ. ಸುಧಾಕರ್ ನಾಲ್ಕು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ರಾಯಭಾರ ಕಚೇರಿಯು ಗೊತ್ತುಪಡಿಸಿ ಮೂರು ವಿಭಿನ್ನ ಸ್ಥಳಗಳನ್ನು ತಲುಪಲು ಭಾರತೀಯ ವಿದ್ಯಾರ್ಥಿಗಳು 10 ರಿಂದ 15 ಕಿಲೋಮೀಟರ್ ಕಾಲ್ನಡಿಗೆಯಲ್ಲಿಯೇ ಸಾಗಿದ್ದಾರೆ ಎಂದು ಹೇಳಿದರು.
3500 ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಕೇಂದ್ರ ಸರ್ಕಾರವು ಸಿದ್ಧತೆಯನ್ನು ನಡೆಸುತ್ತಿದೆ ಎಂದು ಸುಧಾಕರ್ ತಿಳಿಸಿದ್ದಾರೆ .